ನವದೆಹಲಿ: ಕೆಲಸ ಕಳೆದುಕೊಂಡ ನೌಕರರ ಪಿಎಫ್ ಅನ್ನು ಸರ್ಕಾರದಿಂದ ಪಾವತಿಸಲಿದ್ದು, ಅವಧಿ ವಿಸ್ತರಿಸಲಾಗಿದೆ.
ಕೆಲಸ ಕಳೆದುಕೊಂಡ ನೌಕರನನ್ನು ಯಾವುದೇ ಸಂಸ್ಥೆ ಮತ್ತೆ ಕೆಲಸಕ್ಕೆ ಸೇರಿಸಿಕೊಂಡ ಸಂದರ್ಭದಲ್ಲಿ ಸರ್ಕಾರದಿಂದಲೇ ಪಿಎಫ್ ಕಂತು ಪಾವತಿ ಮಾಡಲಾಗುವುದು. ಉದ್ಯೋಗದಾತರು ಮತ್ತು ನೌಕರನ ಪಾಲಿನ ಪಿಎಫ್ ಕಂತನ್ನು 2022 ರವರೆಗೆ ಕೇಂದ್ರ ಸರ್ಕಾರ ಭರಿಸುತ್ತದೆ.
Epfo ಅಡಿಯಲ್ಲಿ ನೋಂದಾವಣೆಗೊಂಡ ಸಣ್ಣ ಮತ್ತು ಮಧ್ಯಮ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನೌಕರರಿಗೆ ಮತ್ತು ಅಂತಹ ಸಂಸ್ಥೆಗಳಿಗೆ ನೆರವು ಸಿಗಲಿದೆ ಎಂದು ಹೇಳಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೆಲಸ ಕಳೆದುಕೊಂಡ ನೌಕರರ ಭವಿಷ್ಯ ನಿಧಿಯಲ್ಲಿ ಉದ್ಯೋಗ ಮತ್ತು ಉದ್ಯೋಗದಾತರ ಪಾಲಿನ ಹಣವನ್ನು 2022 ರ ವರೆಗೆ ಕೇಂದ್ರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.