ನವದೆಹಲಿ: ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 40 ಪೈಸೆ ಮತ್ತು ಡೀಸೆಲ್ ಗೆ 45 ಪೈಸೆ ಏರಿಕೆಯಾಗಿದೆ. ಕಳೆದ 4 ದಿನದಲ್ಲಿ ಪೆಟ್ರೋಲ್ ಲೀಟರ್ ಗೆ 2.14 ರೂ., ಮತ್ತು ಡೀಸೆಲ್ 2.23 ರೂಪಾಯಿ ಹೆಚ್ಚಳವಾಗಿದೆ.
ಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಕಳೆದ ಮೂರು ತಿಂಗಳ ಹಿಂದೆ ಕಚ್ಚಾ ತೈಲದ ಬೇಡಿಕೆ ತೀವ್ರವಾಗಿ ಕುಸಿದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು.
ಆದರೆ, ಕೇಂದ್ರ ಸರ್ಕಾರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಮಾರ್ಚ್ 14 ರಂದು ಪ್ರತಿ ಲೀಟರ್ ತೈಲದ ಮೇಲೆ 3 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿದ್ದು, ಇದರಿಂದಾಗಿ ತೈಲ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಇಳಿಕೆಯಾದರೂ ದೇಶೀಯ ಗ್ರಾಹಕರಿಗೆ ಅನುಕೂಲವಾಗಿರಲಿಲ್ಲ. ಇದಾಗಿ ಸುಮಾರು ಮೂರು ತಿಂಗಳ ನಂತರ ದೈನಂದಿನ ತೈಲ ದರ ಪರಿಷ್ಕರಣೆ ಆರಂಭವಾಗಿದ್ದು ಕಳೆದ 4 ದಿನದಲ್ಲಿ ಪೆಟ್ರೋಲ್ ಲೀಟರ್ ಗೆ 2.14 ರೂ., ಮತ್ತು ಡೀಸೆಲ್ 2.23 ರೂಪಾಯಿ ಹೆಚ್ಚಳವಾಗಿದೆ.