ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಸರ್ಕಾರಿ ನೌಕರರನ್ನು ರಾಷ್ಟ್ರೀಯ ಪಿಂಚಣಿ -NPS ಬದಲಾಗಿ ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಲು ಆದೇಶಿಸಲಾಗಿದೆ. 2006 ರ ಏಪ್ರಿಲ್ 1 ಕ್ಕಿಂತ ಮೊದಲು ನೇಮಕವಾದವರಿಗೆ ಅನ್ವಯವಾಗಲಿದೆ.
2006 ರ ಏಪ್ರಿಲ್ 1 ಕ್ಕಿಂತ ಮೊದಲು ಆಯ್ಕೆ ಪ್ರಕ್ರಿಯೆ ನಡೆದು, ನೇಮಕಾತಿಯಾಗಿ ಕಾರಣಾಂತರದಿಂದ ಈ ದಿನಾಂಕದ ಬಳಿಕ ಸೇವೆಗೆ ಹಾಜರಾದ ನೌಕರರಿಗೆ NPS ಬದಲಾಗಿ ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವಂತೆ ತಿಳಿಸಲಾಗಿದೆ.
ಹಳೆಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರು ನಿಯಮಾನುಸಾರ ರಾಷ್ಟ್ರೀಯ ಪಿಂಚಣಿಯಡಿ ಕ್ರೋಡೀಕರಿಸಿದ್ದ ಸಂಪೂರ್ಣ ವಂತಿಗೆ ಮತ್ತು ವಂತಿಗೆ ಮೇಲಿನ ಬಡ್ಡಿ ಆದಾಯವನ್ನು ಸರ್ಕಾರಕ್ಕೆ ಮರಳಿಸಬೇಕು ಎಂದು ಹೇಳಲಾಗಿದೆ.
2006 ಕ್ಕಿಂತ ಮೊದಲು ನೇಮಕವಾದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಯಲ್ಲಿದೆ. ನಿವೃತ್ತಿಯ ನಂತರ ಈ ನೌಕರರಿಗೆ ಪಿಂಚಣಿ, ಗ್ರಾಚುಟಿ, ಪಿಂಚಣಿ ಏರಿಕೆ ಸೌಲಭ್ಯ ಸಿಗಲಿದೆ. 2006 ರ ನಂತರ ನೇಮಕವಾದ ಸರ್ಕಾರಿ ನೌಕರರಿಗೆ NPS ಜಾರಿ ಮಾಡಲಾಗಿದೆ. ಇದರ ಅನ್ವಯ ನೌಕರರ ಮೂಲವೇತನ ಮತ್ತೆ DA ಮೇಲಿನ ಶೇಕಡ 10 ರಷ್ಟು ಹಾಗೂ ಸರ್ಕಾರದ ಶೇಕಡ 14 ರಷ್ಟು(ಮೊದಲು ಶೇಕಡ 10 ರಷ್ಟಿತ್ತು) ಹಣವನ್ನು NPS ಗೆ ಜಮೆ ಮಾಡಲಾಗುವುದು ಎಂದು ಹೇಳಲಾಗಿದೆ.