alex Certify ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್

ನವದೆಹಲಿ: ಮುಂದಿನ ವರ್ಷದಿಂದ ಸ್ವಯಂಚಾಲಿತ ಕೇಂದ್ರಗಳಲ್ಲಿ ಭಾರಿ ಸರಕು ಸಾಗಣೆ ಮತ್ತು ಪ್ರಯಾಣಿಕ ವಾಹನಗಳ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, 2023ರ ಏಪ್ರಿಲ್ 1 ರಿಂದ ಸ್ವಯಂ ಚಾಲಿತ ಕೇಂದ್ರದಲ್ಲಿ ಪರೀಕ್ಷೆ ಮಾಡುವ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. 2024ರ ಜೂನ್ 1ರಿಂದ ಮಧ್ಯಮಗಾತ್ರದ ಸರಕು ಮತ್ತು ಪ್ರಯಾಣಿಕ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಲಿದೆ. 1989 ರ ಕೇಂದ್ರೀಯ ಮೋಟಾರು ವಾಹನ ಕಾಯ್ದೆ ನಿಯಮದ ಅನ್ವಯ ಆದೇಶವನ್ನು ಹೊರಡಿಸಲಾಗಿದೆ. ಖಾಸಗಿ ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ನೋಂದಣಿ ನವೀಕರಣ ಸಂದರ್ಭದಲ್ಲಿ ಮಾಡಲಾಗುವುದು ಎನ್ನಲಾಗಿದೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...