ನವದೆಹಲಿ: ಸಂಸತ್ ಬಜೆಟ್ ಅಧಿವೇಶನದಲ್ಲಿ ಸರ್ಕಾರ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.
ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂದರ್ಶನವೊಂದರಲ್ಲಿ, ಪರಿಷ್ಕೃತ ದತ್ತಾಂಶ ಸಂರಕ್ಷಣಾ ಮಸೂದೆಯ ಕರಡನ್ನು ಸಮಾಲೋಚನೆಗಾಗಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ದೇಶದ ಡೇಟಾ ಸಂರಕ್ಷಣಾ ಚೌಕಟ್ಟು ಆಧುನಿಕ ಕಾಲಕ್ಕೆ ಅನುಗುಣವಾಗಿರಬೇಕು ಎಂದರು.
ಡಿಜಿಟಲ್ ಜಗತ್ತಿಗೆ ಕಾಗದದ ವ್ಯವಸ್ಥೆಯನ್ನು ರಚಿಸುವ ಪ್ರಯತ್ನದಂತೆ ಕಾಣಬಾರದು. ಸಂಸತ್ತಿನ ಜಂಟಿ ಸಮಿತಿಯು ನೀಡಿದ ಸಲಹೆಗಳನ್ನು ಉಲ್ಲೇಖಿಸಿ ಸಮಗ್ರ ಕಾನೂನು ಚೌಕಟ್ಟಿಗೆ ಹೊಂದಿಕೊಳ್ಳುವ ಹೊಸ ಮಸೂದೆಯನ್ನು ಮಂಡಿಸುವುದಾಗಿ ತಿಳಿಸಿದರು.
ಸರ್ಕಾರ ಈ ತಿಂಗಳ ಆರಂಭದಲ್ಲಿ ಲೋಕಸಭೆಯಲ್ಲಿ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2019 ಅನ್ನು ಹಿಂತೆಗೆದುಕೊಂಡಿತು. ಬಿಲ್ ಮೇಲೆ ಸಚಿವ ವೈಷ್ಣವ್ ಅವರು, ಡೇಟಾ ರಕ್ಷಣೆ ಮತ್ತು ಗೌಪ್ಯತೆಯ ತತ್ವಗಳು ಈಗ ಪ್ರಪಂಚದಾದ್ಯಂತ ಉತ್ತಮವಾಗಿವೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಸರ್ಕಾರ ಕ್ರಮಕೈಗೊಂಡಿದ್ದು, ಕಾನೂನು ಮತ್ತು ತತ್ವಗಳ ಅನುಷ್ಠಾನ ಆಧುನಿಕ ಕಾಲಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಗಮನಹರಿಸಲಾಗಿದೆ ಎಂದು ಹೇಳಿದರು.