ನವದೆಹಲಿ: ಅವಧಿ ಮೀರಿದ ಚಾಲನಾ ಪರವಾನಿಗೆ ಮಾನ್ಯತೆ ಮತ್ತು ವಾಹನ ನೊಂದಣಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
ಅವಧಿ ಮುಗಿದ ಡಿಎಲ್, ವಾಹನ ನೋಂದಣಿ, ಫಿಟ್ನೆಸ್ ಪ್ರಮಾಣಪತ್ರಗಳಂತಹ ವಾಹನ ದಾಖಲೆಗಳ ಮಾನ್ಯತೆ ಅವಧಿ ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಕೊರೋನಾ ಕಾರಣದಿಂದಾಗಿ ಈ ದಾಖಲೆಗಳ ಸಿಂಧುತ್ವವನ್ನು ಮತ್ತೊಮ್ಮೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 31 ರ ವರೆಗೆ ಡಿಎಲ್, ಆರ್.ಸಿ., ಫಿಟ್ನೆಸ್ ಸರ್ಟಿಫಿಕೇಟ್ ಗಳಿಗೆ ಅವಧಿ ಮುಗಿದಿದ್ದರೂ ಮಾನ್ಯತೆ ವಿಸ್ತರಿಸಲಾಗಿತ್ತು. ಈಗ 2021 ರ ಮಾರ್ಚ್ 31 ರವರೆಗೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದ್ದು, ಈ ಮೂಲಕ ನಾಲ್ಕನೇ ಬಾರಿಗೆ ದಾಖಲೆಗಳ ಮಾನ್ಯತೆ ಅವಧಿಯನ್ನು ವಿಸ್ತರಿಸಲಾಗಿದೆ.