ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಬಾಕಿ ತೆರಿಗೆ ಪಾವತಿ ಮಾಡಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸರ್ಕಾರ ಎರಡು ತಿಂಗಳು ಕಾಲಾವಕಾಶ ವಿಸ್ತರಿಸಿದೆ.
ನೇರ ತೆರಿಗೆ ʼವಿವಾದ್ ಸೆ ವಿಶ್ವಾಸ್ʼ ಕಾಯ್ದೆ, 2020ರ ಅಡಿಯಲ್ಲಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚುವರಿ ಮೊತ್ತವಿಲ್ಲದೆ ಪಾವತಿಸುವ ಸಮಯವನ್ನು 2021 ಜೂನ್ 30 ರವರೆಗೆ ವಿಸ್ತರಿಸಲಾಗುವುದು ಎಂದು ಸಿಬಿಡಿಟಿ (ಕೇಂದ್ರೀಯ ನೇರ ತೆರಿಗೆ ಮಂಡಳಿ) ಹೇಳಿಕೆ ನೀಡಿದೆ. ಈ ಮುನ್ನ ಕಾಲಾವಧಿ ಮಾರ್ಚ್ 31ಕ್ಕೆ ಕೊನೆಗೊಂಡಿತ್ತು.
ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ವಿವಾದಿತ ತೆರಿಗೆ, ಬಡ್ಡಿ, ದಂಡ ಅಥವಾ ಶುಲ್ಕವನ್ನು ಇತ್ಯರ್ಥಪಡಿಸಿಕೊಳ್ಳುವ ಅವಕಾಶ ಒದಗಿಸುತ್ತದೆ. ಹಾಗೆಯೇ ತೆರಿಗೆದಾರನಿಗೆ ಬಡ್ಡಿ, ದಂಡ ಮತ್ತು ಆದಾಯ ತೆರಿಗೆ ಕಾಯ್ದೆಯಡಿ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ವಿಚಾರಣೆಯಿಂದ ವಿನಾಯಿತಿಯನ್ನೂ ಸಹ ನೀಡಲಾಗಿದೆ.
ಭಾರತದಲ್ಲಿ ಸತತ 4ನೇ ದಿನವೂ 3ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 2,767 ಜನ ಬಲಿ
ತೆರಿಗೆ ವ್ಯಾಜ್ಯ ಪ್ರಕರಣದಲ್ಲಿ ಏಪ್ರಿಲ್ ಆರಂಭದವರೆಗೆ ಸುಮಾರು 54,000 ಕೋಟಿ ರೂ. ಬೊಕ್ಕಸಕ್ಕೆ ಬಾಕಿ ಉಳಿದಿದೆ. ಈಗಾಗಲೇ ಸಲ್ಲಿಸಿದ ಘೋಷಣೆಗಳ ಆಧಾರದ ಮೇಲೆ ಹೆಚ್ಚಿನವು ಬರುವ ನಿರೀಕ್ಷೆ ಕೂಡ ಇದೆ. ಈ ಆಧಾರದ ಮೇಲೆ ಪಾವತಿ ಮಾಡಲು ಕೊನೆಯ ದಿನಾಂಕವನ್ನು ಈಗ ಜೂನ್ 30ರವರೆಗೆ ವಿಸ್ತರಿಸಲಾಗಿದೆ.