ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ರಾಜಿ ತೆರಿಗೆ ವಾರ್ಷಿಕ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ ಮಾಡಲಾಗಿದೆ.
ಜಿಎಸ್ಟಿ ರಾಜಿ ತೆರಿಗೆ(ಕಂಪೋಸಿಷನ್) ಸ್ಕೀಮ್ ಆಯ್ಕೆ ಮಾಡಿಕೊಂಡವರಿಗೆ ವಾರ್ಷಿಕ ಜಿಎಸ್ಟಿ ರಿಟರ್ನ್ ಅವಧಿಯನ್ನು ಆಗಸ್ಟ್ ಕೊನೆಯವರೆಗೆ ವಿಸ್ತರಣೆ ಮಾಡಲಾಗಿದೆ.
ಜುಲೈ 15ರ ವರೆಗೆ 2019 – 20 ನೇ ಸಾಲಿನ ಜಿಎಸ್ಟಿಆರ್ -4 ವಾರ್ಷಿಕ ರಿಟರ್ನ್ ಸಲ್ಲಿಕೆ ಮಾಡಲು ನೀಡಿದ್ದ ಗಡುವನ್ನು ಆಗಸ್ಟ್ 31 ರ ವರೆಗೆ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ ವಿಸ್ತರಿಸಿದೆ.