ನವದೆಹಲಿ: ತಕ್ಷಣದಿಂದ ಜಾರಿಗೆ ಬರುವಂತೆ ಅಡುಗೆ ಎಣ್ಣೆ ದರ 15 ರೂಪಾಯಿಗಳಷ್ಟು ಕಡಿತಗೊಳಿಸುವಂತೆ ಖಾದ್ಯ ತೈಲ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾದ್ಯ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ(MRP) 15 ರೂಪಾಯಿಗಳ ಕಡಿತವನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಖಾದ್ಯ ತೈಲ ಸಂಘಗಳಿಗೆ ನಿರ್ದೇಶನ ನೀಡಿದೆ, ತಕ್ಷಣವೇ ಜಾರಿಗೆ ಬರುವಂತೆ ಕ್ರಮಕೈಗೊಳ್ಳಲು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಶುಕ್ರವಾರ ತಿಳಿಸಿದೆ.
ತಯಾರಕರು ಮತ್ತು ಸಂಸ್ಕರಣಾಗಾರರಿಂದ ವಿತರಕರಿಗೆ ಬೆಲೆಯನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸದಂತೆ ತಕ್ಷಣವೇ ಕಡಿಮೆ ಮಾಡಬೇಕೆಂದು ಸರ್ಕಾರ ಸಲಹೆ ನೀಡಿದೆ.
ತಯಾರಕರು/ಸಂಸ್ಕರಣೆದಾರರು ವಿತರಕರಿಗೆ ಬೆಲೆಯಲ್ಲಿ ಕಡಿತ ಮಾಡಿದಾಗ, ಅದರ ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು. ಇಲಾಖೆಗೆ ನಿಯಮಿತವಾಗಿ ಮಾಹಿತಿ ನೀಡಬೇಕು. ಕೆಲವು ಕಂಪನಿಗಳು ಇತರ ಬ್ರಾಂಡ್ ಗಳಿಗಿಂತ ಎಂ.ಆರ್.ಪಿ. ಹೆಚ್ಚಿದ್ದರೂ, ಬೆಲೆಗಳನ್ನು ಕಡಿಮೆ ಮಾಡಿಲ್ಲ. ಕೂಡಲದೇ ಬೆಲೆ ಕಡಿಮೆ ಮಾಡಲು ಸೂಚಿಸಲಾಗಿದೆ.