ನವದೆಹಲಿ: ಜಾಗತಿಕ ಬೆಲೆಗಳ ಕುಸಿತದ ನಡುವೆ ಖಾದ್ಯ ತೈಲ ಬೆಲೆಯಲ್ಲಿ ಮತ್ತಷ್ಟು ಕಡಿತ ಮಾಡುವ ಚರ್ಚಿಸಲು ಪ್ರಮುಖ ತೈಲ ಉತ್ಪಾದಕರ ಸಂಘದೊಂದಿಗೆ ಸರ್ಕಾರ 2 ನೇ ಸಭೆ ನಡೆಸಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಜಾಗತಿಕ ಬೆಲೆಗಳ ಕುಸಿತ ಹಿನ್ನಲೆಯಲ್ಲಿ ಖಾದ್ಯ ತೈಲ ಬೆಲೆ ಮತ್ತಷ್ಟು ಕಡಿತ ಮಾಡಲು ಸರ್ಕಾರ ಪ್ರಮುಖ ತೈಲ ಉತ್ಪಾದಕರ ಸಂಘಗಳಿಗೆ ತಿಳಿಸಿದೆ.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ಅಧ್ಯಕ್ಷತೆ ವಹಿಸಿದ್ದರು. ಕಳೆದ ಎರಡು ತಿಂಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ 150 ರಿಂದ 200 ಡಾಲರ್‌ಗಳಷ್ಟು ಕುಸಿದಿದೆ. ಅದನ್ನು ಆಧರಿಸಿ ಎಂಆರ್‌ಪಿಯನ್ನು ಕಡಿಮೆ ಮಾಡಿದ್ದು, ಶೀಘ್ರದಲ್ಲೇ ಮತ್ತಷ್ಟು ಕಡಿಮೆ ಮಾಡುವುದಾಗಿ ಉದ್ಯಮಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಇಲಾಖೆಯು ಪ್ರಮುಖ ಖಾದ್ಯ ತೈಲ ಸಂಘಗಳೊಂದಿಗೆ ಸಭೆ ನಡೆಸಿತ್ತು. ಒಂದು ತಿಂಗಳಿನಿಂದ ಕೆಲವು ಪ್ರಮುಖ ಬ್ರಾಂಡ್‌ಗಳ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯ MRP ಲೀಟರ್‌ಗೆ 5 -15 ರೂಪಾಯಿಗಳಷ್ಟು ಕಡಿಮೆಯಾಗಿದೆ. ಸಾಸಿವೆ ಎಣ್ಣೆ ಮತ್ತು ಇತರ ಖಾದ್ಯ ತೈಲಗಳಯೂ ಇದೇ ರೀತಿಯ ಇಳಿಕೆ ಕಂಡುಬಂದಿದೆ ಎಂದು ಇಲಾಖೆ ತಿಳಿಸಿದೆ.
ಅಂತಾರಾಷ್ಟ್ರೀಯ ಬೆಲೆಗಳಲ್ಲಿ ಇಳಿಕೆ ಮತ್ತು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಈಗ ದರ ಮತ್ತಷ್ಟು ಇಳಿಕೆಯಾಗಲಿದೆ.