ಬೆಂಗಳೂರು: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದ 7,500 ಸ್ವಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆಯಡಿ ತಲಾ 1 ಲಕ್ಷ ರೂ. ನೀಡಲಾಗುವುದು. ಇದಕ್ಕಾಗಿ ಸರ್ಕಾರ 75 ಕೋಟಿ ರೂ. ಅನುದಾನ ನೀಡಲು ಮುಂದಾಗಿದೆ. ಅಮೃತ ಸ್ವಸಹಾಯ ಕಿರುಉದ್ದಿಮೆಗಳು ಯೋಜನೆಯಡಿ 7500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ ಒಂದು ಲಕ್ಷ ರೂ.ನಂತೆ 75 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಮೃತ ಯೋಜನೆಗಳನ್ನು ಘೋಷಿಸಿದ್ದರು. ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಸಹಾಯ ಗುಂಪುಗಳನ್ನು ಕಿರು ಉದ್ದಿಮೆಗಳಾಗಿ ರೂಪಿಸಲಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ನಡಿ ನೋಂದಣಿಯಾಗಿ ಬಂಡವಾಳ ನಿಧಿ ಪಡೆದ ಹಾಗೂ ಕಳೆದ 5 ವರ್ಷದ ಅವಧಿಯಲ್ಲಿ ಬ್ಯಾಂಕ್ ಲಿಂಕೇಜ್ ಪಡೆದುಕೊಂಡು ಸ್ವಸಹಾಯ ಗುಂಪುಗಳನ್ನು ತಾಲೂಕು ಮಟ್ಟದ ಸಮಿತಿಗೆ ಆಯ್ಕೆ ಮಾಡಿ ಅನುದಾನ ನೀಡಲಾಗುತ್ತದೆ.