
ಭಾರತೀಯ ರೈಲ್ವೆ ಇಲಾಖೆಯು ಕೋಟಿಗಟ್ಟಲೆ ಭಾರತೀಯರ ಆದಾಯದಿಂದ ನಡೆಯುತ್ತಿದೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಕೋಟ್ಯಾಧಿಪತಿ ಅದಾನಿ ಕಂಪನಿಯ ಚಿಹ್ನೆಯನ್ನ ರೈಲ್ವೆಗಳ ಮೇಲೆ ಅಂಟಿಸಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಯ ಬಹುಪಾಲು ಭಾಗ ಮೋದಿಯ ಕೋಟ್ಯಾಧಿಪತಿ ಗೆಳೆಯನಿಗೆ ಸೇರಬಹುದು. ದೇಶದಲ್ಲಿ ರೈತರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಮೋದಿಜಿ ದೇಶದ ಕೃಷಿ ವಲಯಗಳನ್ನ ತನ್ನ ಕೋಟ್ಯಾಧಿಪತಿ ಗೆಳೆಯರೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ ಎಂದು ಫೇಸ್ಬುಕ್ನಲ್ಲಿ ಆರೋಪ ಮಾಡಿದ್ದರು.
ಡಿಸೆಂಬರ್ 14ರಂದು ಪ್ರಿಯಾಂಕಾ ಗಾಂಧಿ ಶೇರ್ ಮಾಡಿದ್ದ ವಿಡಿಯೋ ಸಾಕಷ್ಟು ವೀವ್ಸ್, ಲೈಕ್ಸ್ ಹಾಗೂ ಕಾಮೆಂಟ್ಗಳನ್ನ ಸಂಪಾದಿಸಿತ್ತು. ಆದರೆ ಪ್ರಿಯಾಂಕಾ ಗಾಂಧಿಯ ಈ ಆರೋಪಕ್ಕೆ ಸರ್ಕಾರದ ಮಾಹಿತಿ ಪ್ರಸರಣ ಸಂಸ್ಥೆ ಸ್ಪಷ್ಟನೆ ನೀಡಿದೆ. ಪ್ರಿಯಾಂಕಾ ಗಾಂಧಿ ಅವರ ಆರೋಪ ಆಧಾರ ರಹಿತವಾಗಿದೆ. ಇದು ಕೇವಲ ಒಂದು ವಾಣಿಜ್ಯ ಜಾಹೀರಾತಾಗಿದೆ. ಪ್ರಿಯಾಂಕಾ ಗಾಂಧಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.