ನವದೆಹಲಿ: ಪಿಂಚಣಿ ಪಾವತಿ, ಸಣ್ಣ ಉಳಿತಾಯ ಯೋಜನೆಗಳನ್ನು ಖಾಸಗಿ ಬ್ಯಾಂಕುಗಳಲ್ಲಿಯೂ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಎಲ್ಲ ಬ್ಯಾಂಕುಗಳಿಗೆ ತೆರಿಗೆ ಸಂಗ್ರಹ, ಪಿಂಚಣಿ ಪಾವತಿ, ಉಳಿತಾಯ ಯೋಜನೆ ನಿರ್ವಹಣೆ ಸೇರಿದಂತೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದೆ.
ದೊಡ್ಡ ಬ್ಯಾಂಕುಗಳಿಗೆ ಮಾತ್ರ ಇಂತಹ ಅವಕಾಶ ಇತ್ತು. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಖಾಸಗಿ ಬ್ಯಾಂಕುಗಳಿಗೂ ಅವಕಾಶ ನೀಡಲಾಗಿದೆ. ಇನ್ನು ಮುಂದೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸರ್ಕಾರದ ವಹಿವಾಟುಗಳ ವಿಚಾರದಲ್ಲಿ ಖಾಸಗಿ ಬ್ಯಾಂಕುಗಳಿಗೆ ಮಾನ್ಯತೆ ನೀಡಲು ಯಾವ ನಿರ್ಬಂಧ ಇರುವುದಿಲ್ಲ. ಈ ವಿಷಯವನ್ನು ರಿಸರ್ವ್ ಬ್ಯಾಂಕಿಗೆ ತಿಳಿಸಲಾಗಿದೆ. ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಖಾಸಗಿ ಬ್ಯಾಂಕುಗಳು ಸಮಾನ ಪಾಲುದಾರರು ಆಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಹಿವಾಟುಗಳನ್ನು ಖಾಸಗಿ ಬ್ಯಾಂಕುಗಳು ನಡೆಸಬಹುದು ಎನ್ನುವ ತೀರ್ಮಾನ ಕೈಗೊಳ್ಳಲಾಗಿದ್ದು, ಇದು ಖಾಸಗಿ ಬ್ಯಾಂಕ್ ವಲಯಕ್ಕೆ ಉತ್ತೇಜನ ನೀಡುವಂತಿದೆ ಎಂದು ಹೇಳಲಾಗಿದೆ.