ನವದೆಹಲಿ: ಲಸಿಕೆ ಆಮದು, ರಫ್ತು ಮಾಡಲು ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ. ಲಸಿಕೆ ವಿತರಣೆ ಹಾಗೂ ದಾಸ್ತಾನು ಸಂಬಂಧ ಮಿತಿ ಇರುವುದಿಲ್ಲ ಎಂದು ಹೇಳಲಾಗಿದೆ.
ಯಾವುದೇ ಮಿತಿ ಮೌಲ್ಯವಿಲ್ಲದೇ ಲಸಿಕೆ ಆಮದು, ರಫ್ತು ಮಾಡಬಹುದಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಇನ್ ಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್(ಸಿಬಿಐಸಿ)ನಿಂದ ಆಮದು-ರಫ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.
ಲಸಿಕೆಗಳನ್ನು ನಿಯಂತ್ರಿತ ತಾಪಮಾನದಲ್ಲಿ ಸಂಗ್ರಹಿಸಬೇಕಿದೆ. ಕೊರೋನಾ ಲಸಿಕೆ ಸಾಗಾಟ ತ್ವರಿತವಾಗಿ ಆಗಬೇಕಿರುವ ಹಿನ್ನಲೆಯಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಲಸಿಕೆಯ ತ್ವರಿತವಾಗಿ ಸ್ಥಳಾಂತರಿಸಲು ಹಳೆ ನಿಯಮದಿಂದ ಅಡ್ಡಿಯಾಗಿತ್ತು. ಹೀಗಾಗಿ ಲಸಿಕೆಯ ತ್ವರಿತ ಸ್ಥಳಾಂತರಕ್ಕೆ ಪರಿಣಾಮಕಾರಿ ಕಾರ್ಯವಿಧಾನ ಜಾರಿಗೆ ಕಾನೂನು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.