ನವದೆಹಲಿ: ಬ್ಯಾಂಕ್ ಸಾಲಗಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಚಕ್ರಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಸುಪ್ರೀಂಕೋರ್ಟ್ಗೆ ಈ ಕುರಿತಾಗಿ ಅಫಿಡವಿಟ್ ಸಲ್ಲಿಸಲಾಗಿದೆ.
6 ತಿಂಗಳ ಚಕ್ರ ಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರದಿಂದ ನಿರ್ಧರಿಸಲಾಗಿದ್ದು, ಮಾರ್ಚ್ ನಿಂದ ಆಗಸ್ಟ್ ವರೆಗಿನ ಚಕ್ರಬಡ್ಡಿ ಮನ್ನಾ ಮಾಡಲಾಗುವುದು. ಎರಡು ಕೋಟಿ ರೂಪಾಯಿವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ಮಾಡಲಾಗುವುದು.
ಗೃಹ, ವಾಹನ, ಕೃಷಿ ಸಾಲ, ವೈಯಕ್ತಿಕ ಸಾಲ, ಉದ್ಯಮ, ಶೈಕ್ಷಣಿಕ, ವೃತ್ತಿ ಸಾಲಗಳಿಗೆ ಇದು ಅನ್ವಯವಾಗಲಿದೆ. ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಗೆ ಈ ಕುರಿತಾಗಿ ಪ್ರಮಾಣ ಪತ್ರ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಇಎಂಐ ಪಾವತಿ ಮುಂದೂಡಿದ್ದು, ಈ ಮೊರಾಟೋರಿಯಂ ಅವಧಿಯಲ್ಲಿನ ಸಾಲದ ಕಂತುಗಳ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡಲಾಗುವುದು ಎನ್ನಲಾಗಿದೆ.