ನವದೆಹಲಿ: ದೇಶದ ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎರಡನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಡಿಸೆಂಬರ್ 15 ರ ವೇಳೆಗೆ ಪಿಎಂ ಕಿಸಾನ್ ಯೋಜನೆ 10ನೇ ಕಂತು ಬಿಡುಗಡೆ ಮಾಡಲಾಗುವುದು. ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ರಾಜ್ಯದ ರೈತರಿಗೆ ಹೆಚ್ಚುವರಿಯಾಗಿ 4000 ರೂ. ಸಿಗಲಿದೆ.
ಯೋಜನೆಗೆ ನೋಂದಾಯಿಸಲು, ಮಾಹಿತಿ ಮತ್ತು ನಿಮ್ಮ ಖಾತೆ ಕಂತಿನ ವಿವರ ತಿಳಿಯಲು https://pmkisan.gov.in ವೆಬ್ ಸೈಟ್ ಗಮನಿಸಬಹುದಾಗಿದೆ. ಅದರಲ್ಲಿ ಕೇಳಿರುವ ಮಾಹಿತಿಯನ್ನು ದಾಖಲಿಸಿ ಯೋಜನೆಗೆ ನೋಂದಾಯಿಸಬಹುದು ಎಂದು ಹೇಳಲಾಗಿದೆ.