“ಪ್ರಿಯ ಗ್ರಾಹಕರರೇ………., ನೀವು ನಿಮ್ಮ ಖಾತೆಗೆ ಇತ್ತೀಚೆಗೆ ಸೇರಿಸಿರುವ ನಾಮಿನಿ ……ಗೆ ಅರ್ಧ ಗಂಟೆಯ ಬಳಿಕ ಹಣ ಕಳುಹಿಸಬಹುದಾಗಿದೆ” ಎಂಬ ಸಂದೇಶವೊಂದನ್ನು ನಿಮ್ಮ ಮೊಬೈಲ್‌ನಲ್ಲಿ ರಿಸೀವ್ ಮಾಡಿದ್ದಲ್ಲಿ ಜಾಗೃತರಾಗಿರಿ. ಇದೊಂದು ಸ್ಪೂಫ್ ಆಗಿದ್ದು, ನಿಮ್ಮನ್ನು ವಂಚಿಸಲು ಹೆಣೆದಿರುವ ಜಾಲ.
ಇಂಥ ಸಂದೇಶಗಳ ಮೂಲಕ ಬರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಕೋರಿ”ಸೈಬರ್ ದೋಸ್ತ್’ ತನ್ನ ಟ್ವಿಟರ್ ಖಾತೆಯಲ್ಲಿ ಎಚ್ಚರಿಕೆಯ ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ. ’ಸೈಬರ್ ದೋಸ್ತ್’ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ನಿರ್ವಹಿಸುತ್ತಿರುವ ಸೈಬರ್ ಸುರಕ್ಷತಾ ಅಭಿಯಾನದ ಟ್ವಿಟರ್ ಹ್ಯಾಂಡಲ್ ಆಗಿದೆ.
ಪೋಸ್ಟ್‌ನಲ್ಲಿ ಎಸ್‌ಎಂಎಸ್ ಒಂದರ ಸ್ಕ್ರೀನ್‌ಶಾಟ್ ಒಂದು ಇದ್ದು, “ಆನ್ಲೈನ್ ಬ್ಯಾಂಕಿಂಗ್ ಅಲರ್ಟ್… “ಪ್ರಿಯ ಗ್ರಾಹಕರೇ XXXX, ನೀವು ನಿಮ್ಮ ಖಾತೆಗೆ ಇತ್ತೀಚೆಗೆ ಸೇರಿಸಿರುವ ನಾಮಿನಿ XXXXಗೆ ಅರ್ಧ ಗಂಟೆಯ ಬಳಿಕ ಹಣ ಕಳುಹಿಸಬಹುದಾಗಿದೆ” ಎಂದು ಟೆಕ್ಸ್ಟ್ ಇದೆ.
ಇಂಥ ಸಂದೇಶಗಳಲ್ಲಿ ಶೇರ್ ಮಾಡಲಾದ ಲಿಂಕ್‌ಗಳನ್ನು ತೆರೆಯುವ ಮುನ್ನ ಗ್ರಾಹಕರು ತಂತಮ್ಮ ಬ್ಯಾಂಕುಗಳನ್ನು ವಿಚಾರಿಸಬೇಕೆಂದು ಸೈಬರ್ ದೋಸ್ತ್ ಮನವಿ ಮಾಡಿಕೊಂಡಿದ್ದಾರೆ.