ನವದೆಹಲಿ: ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ, ಸೋಯಾಬಿನ್ ಮೊದಲಾದ ಅಡುಗೆ ಎಣ್ಣೆಗಳ ದರ ಮತ್ತಷ್ಟು ಹೇಳಿಕೆ ಮಾಡುವಂತೆ ಖಾದ್ಯ ತೈಲ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಕಡಿಮೆ ಇದೆ. ಆದರೆ, ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ದರ ಕಡಿಮೆಯಾಗುತ್ತಿಲ್ಲ. ಕಳೆದ ಡಿಸೆಂಬರ್ ನಲ್ಲಿ ದರ ಸ್ವಲ್ಪ ಇಳಿಕೆಯಾಗಿತ್ತು. ಜನವರಿಯಲ್ಲಿ ಮತ್ತೆ ಖಾದ್ಯ ತೈಲಗಳ ದರ ಹೆಚ್ಚಾಗಿದೆ. ಹೀಗಾಗಿ ತೈಲ ದರ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಜಾಗತಿಕ ದರಕ್ಕೆ ಅನುಗುಣವಾಗಿ ತೈಲದ ಬೆಲೆ ಕಡಿಮೆ ಮಾಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ದರ ಇಳಿಕೆ ಮಾಡದ ತೈಲ ಕಂಪನಿಗಳ ವಿರುದ್ದ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ಖಾದ್ಯ ತೈಲಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಂಬರ್ ನಲ್ಲಿ ಶೇಕಡ 10ರಷ್ಟು ಕುಸಿತ ಕಂಡಿದ್ದ ಖಾದ್ಯ ತೈಲ ದರ, ಜನವರಿಯಲ್ಲಿ ಶೇಕಡ 8ರಷ್ಟು ಏರಿಕೆ ಕಂಡಿದೆ. ಸರ್ಕಾರ ಒತ್ತಡ ಹೇರಿದಲ್ಲಿ ಶೇಕಡ 3-4ರಷ್ಟು ದರ ಇಳಿಸಬಹುದು ಎಂದು ಹೇಳಲಾಗಿದೆ.