alex Certify ಗೃಹಿಣಿಯರಿಗೆ ಗುಡ್ ನ್ಯೂಸ್: ಹಗುರವಾಗಲಿದೆ LPG ಸಿಲಿಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಿಣಿಯರಿಗೆ ಗುಡ್ ನ್ಯೂಸ್: ಹಗುರವಾಗಲಿದೆ LPG ಸಿಲಿಂಡರ್

ನವದೆಹಲಿ: ಪ್ರಸ್ತುತ ಗೃಹ ಬಳಕೆಯ ಸಿಲಿಂಡರ್ ತೂಕ 14.2 ಕೆ.ಜಿ. ಇದ್ದು, ಇದನ್ನು ಸಾಗಾಣಿಕೆ ಮಾಡಲು ಮಹಿಳೆಯರಿಗೆ ಕಷ್ಟ ಸಾಧ್ಯ. ಚಿಕ್ಕ ಮಕ್ಕಳಿಗೂ ಕೂಡ ಭಾರವೆನಿಸುತ್ತದೆ. ಸಾಮಾನ್ಯವಾ ಸಿಲಿಂಡರ್ ಮನೆಗೆ ಬರುವ ದಿನ ಮಹಿಳೆಯರಿಗೆ ಕಿರಿಕಿರಿ ಆಗುತ್ತದೆ.

ಈ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಗೃಹ ಬಳಕೆಯ ಸಿಲಿಂಡರ್ ತೂಕ ಕಡಿಮೆ ಮಾಡಲು ಚಿಂತನೆ ನಡೆಸಿದೆ. ರಾಜ್ಯ ಸಭೆಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿಲಿಂಡರ್ ಭಾರದಿಂದಾಗಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಕುರಿತು ಸದಸ್ಯರೊಬ್ಬರು ಕೇಳಿದ್ದ ಪ್ರಶ್ನೆಗೆ ಇದಕ್ಕೆ ಉತ್ತರಿಸಿದ ಸಚಿವರು, ಮಹಿಳೆಯರು ಭಾರ ಹೊರುವುದನ್ನು ನಾವು ಬಯಸುವುದಿಲ್ಲ. ಹೀಗಾಗಿಯೇ ಅದರ ತೂಕ ಇಳಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

14.2 ಕೆಜಿ ಇರುವ ಗೃಹ ಬಳಕೆಯ ತೂಕವನ್ನು ಎಷ್ಟು ಕಡಿಮೆ ಮಾಡಲಾಗುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರ ಇದುವರೆಗೂ ನಿರ್ಧರಿಸಿಲ್ಲ. ಈ ತೂಕವನ್ನು 5 ಕೆಜಿಗೆ ಇಳಿಸಬೇಕೆ ? ಅಥವಾ ಬೇರೆ ಮಾರ್ಗವಿದೆಯೇ ? ಎಂಬ ಕುರಿತು ಇನ್ನೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...