alex Certify ಬೈಕ್, ಕಾರ್ ಸೇರಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್, ಕಾರ್ ಸೇರಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ದೇಶದಲ್ಲಿ ಎಲೆಕ್ಟ್ರಿಕ್​ ಚಾರ್ಜಿಂಗ್​ ಸೌಕರ್ಯಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಯೋಜನೆಗಾಗಿ ಕೇಂದ್ರ ಸರ್ಕಾರ ಒಟ್ಟು 10 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ.

ಸಾರ್ವಜನಿಕ ಹಾಗೂ ವೈಯಕ್ತಿಕ ಬಳಕೆಗೆ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಹೀಗಾಗಿ 7000 ಇ ಬಸ್, 5 ಲಕ್ಷ ತ್ರಿಚಕ್ರ ವಾಹನ, 55 ಸಾವಿರ ಇ ನಾಲ್ಕು ಚಕ್ರದ ವಾಹನಗಳು ಹಾಗೂ 10 ಲಕ್ಷ ಇ ಮೊಟಾರ್ ಸೈಕಲ್​​ಗಳಿಗೆ ಸಬ್ಸಿಡಿ ನೀಡುವ ಉದ್ದೇಶವನ್ನ ಸರ್ಕಾರ ಹೊಂದಿದೆ.

ಇದು ಮಾತ್ರವಲ್ಲದೇ ಎಲೆಕ್ಟ್ರಿಕ್​ ವಾಹನ ಬಳಕೆದಾರರಿಗೆ ಚಾರ್ಜ್​ ಮಾಡುವ ಆತಂಕವನ್ನ ದೂರ ಮಾಡುವ ಸಲುವಾಗಿ ಹೆಚ್ಚು ಹೆಚ್ಚು ಚಾರ್ಜಿಂಗ್​ ವ್ಯವಸ್ಥೆಯನ್ನ ಮಾಡೋದಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಎಲೆಕ್ಟ್ರಿಕ್​ ವಾಹನಗಳ ಮೇಲಿನ ಜಿಎಸ್​ಟಿ ಶೇಕಡಾ 5 ರಷ್ಟಿದ್ದು ವಾಹನಗಳ ಮೇಲಿನ ತೆರಿಗೆಯನ್ನ ಮತ್ತಷ್ಟು ಕಡಿಮೆ ಮಾಡುವ ಪ್ರಸ್ತಾಪ ಸಧ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದೂ ಗಡ್ಕರಿ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...