alex Certify ಕೇವಲ 750 ರೂ.ಗೆ LPG ಸಿಲಿಂಡರ್ ನೀಡಲಿದೆ ಈ ಸರ್ಕಾರಿ ತೈಲ ಕಂಪನಿ: ಸಾಮಾನ್ಯ ಬೆಲೆಗಿಂತ 300 ರೂ. ಕಡಿಮೆ ಇಂಡೇನ್ ಕಾಂಪೋಸಿಟ್ ಸಿಲಿಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 750 ರೂ.ಗೆ LPG ಸಿಲಿಂಡರ್ ನೀಡಲಿದೆ ಈ ಸರ್ಕಾರಿ ತೈಲ ಕಂಪನಿ: ಸಾಮಾನ್ಯ ಬೆಲೆಗಿಂತ 300 ರೂ. ಕಡಿಮೆ ಇಂಡೇನ್ ಕಾಂಪೋಸಿಟ್ ಸಿಲಿಂಡರ್

ನವದೆಹಲಿ: ದಿನಬಳಕೆಯ ವಸ್ತುಗಳ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ. ಎಲ್‌.ಪಿ.ಜಿ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ.

ದೈನಂದಿನ ಮನೆ ಬಳಕೆಯ ವಸ್ತುಗಳು ದುಬಾರಿಯಾದಾಗ ಹೆಚ್ಚು ಪರಿಣಾಮ ಬೀರುತ್ತವೆ. ಅದರಲ್ಲಿ LPG ಕೂಡ ಒಂದಾಗಿದೆ. ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1053 ರೂ. ಹೊಸ ಗ್ಯಾಸ್ ಕನೆಕ್ಷನ್ ಪಡೆಯಲು ನೀವು ಯೋಚಿಸುತ್ತಿದ್ದರೆ ಮತ್ತು ಅದಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ ಮುಖ್ಯ ಮಾಹಿತಿ ಇಲ್ಲಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡೇನ್ ಗ್ರಾಹಕರ ಅನುಕೂಲಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ನೀವು ಕಡಿಮೆ ಬೆಲೆಯಲ್ಲಿ ಎಲ್ಪಿಜಿ ಸಿಲಿಂಡರ್ ಪಡೆಯಬಹುದು. ಇಂಡೇನ್‌ ನ ಈ ಹೊಸ ಪ್ಲಾನ್‌ ನೊಂದಿಗೆ ನೀವು ಕೇವಲ 750 ರೂ.ಗೆ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತೀರಿ. ಅಂದರೆ ಈ ಗ್ಯಾಸ್ ಸಿಲಿಂಡರ್ ಸಾಮಾನ್ಯ ಬೆಲೆಗಿಂತ ಸುಮಾರು 300 ರೂಪಾಯಿ ಅಗ್ಗವಾಗಿ ಸಿಗಲಿದೆ.

ಇಂಡೇನ್‌ ನಿಂದ ಹೊಸ ಸೌಲಭ್ಯ

ಸಾಮಾನ್ಯ ಜನರಿಗಾಗಿ ಇಂಡೇನ್ ಕಂಪನಿಯಿಂದ ಕಾಂಪೋಸಿಟ್ ಸಿಲಿಂಡರ್ ಸೌಲಭ್ಯ ಆರಂಭಿಸಲಾಗಿದೆ. ಈ ಸಿಲಿಂಡರ್‌ ತೂಕ ಸಾಮಾನ್ಯ ಸಿಲಿಂಡರ್‌ ಗಿಂತ ಕಡಿಮೆ. ಆದ್ದರಿಂದ ಅದರ ಬೆಲೆಯನ್ನೂ ಕಡಿಮೆ ಇರಿಸಲಾಗಿದೆ. ನೀವು ಈ ಸಿಲಿಂಡರ್ ಅನ್ನು ಕೇವಲ 750 ರೂಪಾಯಿಗೆ ಖರೀದಿಸಬಹುದು. ಇದರ ವಿಶೇಷವೆಂದರೆ ನೀವು ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದು.

ಕಾಂಪೋಸಿಟ್ ಸಿಲಿಂಡರ್

ಸಾಮಾನ್ಯ ಸಿಲಿಂಡರ್‌ ಗಳಿಗಿಂತ ಸಂಯೋಜಿತ ಸಿಲಿಂಡರ್‌ ಗಳು ತೂಕದಲ್ಲಿ ಹಗುರವಾಗಿರುತ್ತವೆ. ಇದರಲ್ಲಿ 10 ಕೆಜಿ ಗ್ಯಾಸ್ ಸಿಗುತ್ತದೆ. ಇದರಿಂದಾಗಿ ಈ ಸಿಲಿಂಡರ್‌ ಬೆಲೆಯನ್ನೂ ಕಡಿಮೆ ಮಾಡಲಾಗಿದೆ. ಈ ಸಿಲಿಂಡರ್ ಪಾರದರ್ಶಕವಾಗಿರುವುದು ವಿಶೇಷ. ಇಂಡೇನ್ ಪ್ರಸ್ತುತ 28 ನಗರಗಳಲ್ಲಿ ಈ ಸೌಲಭ್ಯವನ್ನು ಒದಗಿಸುತ್ತಿದೆ. ಶೀಘ್ರದಲ್ಲೇ ಇದನ್ನು ವಿಸ್ತರಿಸಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...