ನವದೆಹಲಿ: ಭಾರತ ಸರ್ಕಾರ ಟ್ವಿಟರ್ ಬದಲಿಗೆ ದೇಸಿ ಕೂ ಆಪ್ ಅನ್ನು ಬಳಸಲು ಮುಂದಾಗಿದೆ. ಸಾರ್ವಜನಿಕರೊಂದಿಗೆ ಸಂವಹನ ಮಾಡುವ ಮೊದಲ ಆದ್ಯತೆಯಾಗಿ ಕೂ ಆಪ್ ಬಳಸಲಾಗುತ್ತದೆ.
ಆತ್ಮ ನಿರ್ಭರ ಭಾರತ್ ಆಪ್ ಪ್ರೋತ್ಸಾಹಿಸಲು ಮೋದಿ ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳು, ಸಂಸದರು, ಅಧಿಕಾರಿಗಳು ಸೇರಿದಂತೆ ಸರ್ಕಾರದ ಹಿರಿಯ ಸದಸ್ಯರು ಕೂ ಆಪ್ ಬಳಕೆಗೆ ಮುಂದಾಗಿದ್ದಾರೆ. ಮೊದಲ ಆದ್ಯತೆಯಾಗಿ ಕೂ ಆಪ್ ಬಳಸಲಿದ್ದು, ನಂತರ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಲಾಗಿದೆ.
ಶೀಘ್ರದಲ್ಲಿಯೇ ಸರ್ಕಾರದ ಪ್ರಮುಖ ಮಾಹಿತಿ ಮತ್ತು ಆದೇಶಗಳ ಕುರಿತಾಗಿ ಕೂ ಆಪ್ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದು, ಮಾಹಿತಿ ಹಂಚಿಕೊಳ್ಳುವುದು ಆರಂಭವಾಗಲಿದೆ. ಕ್ಯಾಬಿನೆಟ್ ಸಚಿವ ಪಿಯುಷ್ ಗೋಯಲ್ ಈಗಾಗಲೇ ತಾವು ಕೂ ಆಪ್ ಬಳಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.