ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಭಾರತದಲ್ಲಿ ನಿಷೇಧಿಸುವ ಕುರಿತು ಚರ್ಚೆ ನಡೆದಿದೆ. ಭಾರತದಲ್ಲಿ ಟ್ವಿಟರ್ ಗೆ ನಿಷೇಧದ ಭೀತಿ ಶುರುವಾಗಿದೆ ಎಂದು ಹೇಳಲಾಗಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಇಂತಹುದೊಂದು ಸುಳಿವು ನೀಡಲಾಗಿದೆ. ಲೇಹ್ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ಟ್ವಿಟರ್ ವಿವಾದಿತವಾಗಿ ತೋರಿಸಿತ್ತು. ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿರುವ ಲೇಹ್ ಪ್ರದೇಶವನ್ನು ಹೀಗೆ ತೋರಿಸಿ ದೇಶದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತಂದ ಆರೋಪ ಟ್ವಿಟರ್ ಮೇಲಿದೆ.
ಈ ಕುರಿತಾಗಿ 5 ದಿನಗಳೊಳಗೆ ಉತ್ತರ ನೀಡಲು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ನೀಡಿ ಸೂಚಿಸಿದ್ದು, ಬಳಿಕ ಕಾನೂನು ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.