ಮುಂಬೈ: ಲಕ್ಷ್ಮಿ ವಿಲಾಸ್ ಬ್ಯಾಂಕ್ ವ್ಯವಹಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ನಿರ್ಬಂಧ ಹೇರಲಾಗಿದೆ. 1 ತಿಂಗಳ ಮೊರಾಟೋರಿಯಂ ವಿಧಿಸಲಾಗಿದ್ದು, ಡಿಸೆಂಬರ್ 16 ರ ವರೆಗೆ 25 ಸಾವಿರ ರೂ. ನಗದು ಮಿತಿ ಹೇರಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯ ಅನ್ವಯ ನಿರ್ಬಂಧ ಹೇರಲಾಗಿದ್ದು, ಠೇವಣಿದಾರರು ಮತ್ತು ಸಾಲಗಾರರಿಗೆ ನಗದು ಮಿತಿ ಅನ್ವಯವಾಗಲಿದೆ. ಆದರೆ, ವೈದ್ಯಕೀಯ ಮತ್ತು ಶಿಕ್ಷಣ ವೆಚ್ಚಕ್ಕೆ ನಗದು ಮಿತಿ ಅನ್ವಯವಾಗುವುದಿಲ್ಲ. 25 ಸಾವಿರ ರೂ.ಗಿಂತ ಹೆಚ್ಚಿನ ನಗದು ಪಡೆಯಬಹುದು ಎಂದು ಹೇಳಲಾಗಿದೆ.
ಇನ್ನು ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್ ಅನ್ನು ಮೊರಾಟೋರಿಯಂ ಅಡಿಯಲ್ಲಿ ಇರಿಸಲಾಗಿದ್ದು, ನಿರ್ದೇಶಕರ ಮಂಡಳಿ ಮೇಲ್ವಿಚಾರಣೆ ನಡೆಸಲು ನಿರ್ವಾಹಕರ ನೇಮಕ ಮಾಡಲಾಗಿದೆ.