ನವದೆಹಲಿ: ಕೊರೋನಾ ಲಸಿಕೆಯನ್ನು ಪಡೆಯಲು ಜನರನ್ನು ಉತ್ತೇಜಿಸುವ ಸಲುವಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಠೇವಣಿ ಯೋಜನೆ ಆರಂಭಿಸಿದೆ.
ಇಮ್ಯೂನ್ ಇಂಡಿಯಾ ಠೇವಣಿ ಯೋಜನೆಯಡಿ ಲಸಿಕೆ ಪಡೆಯುವವರಿಗೆ ಅನ್ವಯವಾಗುವ ಕಾರ್ಡ್ ದರಕ್ಕಿಂತ ಶೇಕಡ 25 ರಷ್ಟು ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚುವರಿ ಬಡ್ಡಿದರ ನೀಡಲಾಗುವುದು.
1,111 ದಿನಗಳ ಇಮ್ಯೂನ್ ಇಂಡಿಯಾ ಯೋಜನೆಯಡಿ 25 ಬಿಪಿಎಸ್ ಹೆಚ್ಚುವರಿ ಬಡ್ಡಿದರ ನೀಡಲಾಗುತ್ತದೆ. ಇದು ಸೀಮಿತ ಅವಧಿಗೆ ಇರಲಿದೆ. ಹಿರಿಯ ನಾಗರಿಕರಿಗೂ ಅನ್ವಯವಾಗುವಂತೆ ಹೆಚ್ಚಿನ ಬಡ್ಡಿದರ ನೀಡಲಾಗುವುದು. ಕೊರೋನಾ ವ್ಯಾಕ್ಸಿನೇಷನ್ ಉತ್ತೇಜಿಸಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಈ ವಿಶೇಷ ಯೋಜನೆ ಆರಂಭಿಸಿದ್ದು, ಠೇವಣಿಗೆ ಆಕರ್ಷಕ ಹೆಚ್ಚುವರಿ ಬಡ್ಡಿದರ ನೀಡಲಾಗುತ್ತದೆ.