ದೇಶದಾದ್ಯಂತ ಕೊರೊನಾ ಭೀಕರತೆ ಮುಂದುವರಿದಿದ್ದು ಎಲ್ಲೆಡೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ವೆಂಟಿಲೇಟರ್ ಅಭಾವ, ಆಕ್ಸಿಜನ್ ಕೊರತೆ ಹೀಗೆ ನಾನಾ ಸಮಸ್ಯೆಗಳು ಎದುರಾಗ್ತಿದೆ. ಈ ನಡುವೆ ಅಮೆರಿಕದಲ್ಲಿ ಕೇಂದ್ರ ಕಚೇರಿಯನ್ನ ಹೊಂದಿರುವ ಟೆಕ್ ದೈತ್ಯ ಗೂಗಲ್ ಸಂಸ್ಥೆ ಭಾರತಕ್ಕೆ 135 ಕೋಟಿ ರೂಪಾಯಿ ಹಣವನ್ನ ಬಿಡುಗಡೆ ಮಾಡಿದೆ.
ಕೊರೊನಾದಿಂದ ಭಾರೀ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ದೈನಂದಿನ ಖರ್ಚುಗಳಿಗೆ ಸಹಾಯ ಮಾಡಲು ಹಾಗೂ ಆಮ್ಲಜನಕ ಪೂರೈಕೆ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳ ಪೂರೈಕೆಗಾಗಿ ಈ ದೇಣಿಗೆ ಹಣ ಉಪಯೋಗವಾಗಲಿದೆ.
ಇಂದು ನಾವು ಭಾರತಕ್ಕೆ 135 ಕೋಟಿ ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ನೀಡುತ್ತಿದ್ದೇವೆ. ಕೊರೊನಾದಿಂದ ಭಾರೀ ಸಂಕಷ್ಟಕ್ಕೆ ಈಡಾಗಿರುವ ಕುಟುಂಬಗಳಿಗೆ ಸಹಾಯ ಮಾಡಲು ಈ ದೇಣಿಗೆ ಹಣವನ್ನ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಯುನೆಸ್ಕೋ ಮೂಲಕ ದೇಶದಲ್ಲಿ ವೈದ್ಯಕೀಯ ಸೌಲಭ್ಯಕ್ಕೂ ದೇಣಿಗೆ ಹಣ ನೀಡಲಿದ್ದೇವೆ ಎಂದು ಸಂಜಯ್ ಗುಪ್ತಾ ಹೇಳಿದ್ದಾರೆ.
ಕೆಲಸ ಸಿಗದಿದ್ದರೂ ಪರವಾಗಿಲ್ಲ ಸಂದರ್ಶನದಲ್ಲಿ ಭಾಗಿಯಾದ್ರೂ ಸಿಗುತ್ತೆ ಹಣ….!
ಇನ್ನು ಈ ಮೊತ್ತದಲ್ಲಿ ನಮ್ಮ ಕಂಪನಿಯ ಉದ್ಯೋಗಿಗಳ ದೇಣಿಗೆ ಹಣವೂ ಸೇರಿದೆ. ಸರಿ ಸುಮಾರು 900 ಸಿಬ್ಬಂದಿ 3.7 ಕೋಟಿ ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು ಗುಪ್ತಾ ಹೇಳಿದ್ರು.