ಕಲರ್ಫುಲ್ ಹೂಗಳಿಂದ ಗೂಗಲ್ ಡೂಡಲ್ ಈ ವರ್ಷದ ವಸಂತ ಋತುವನ್ನ ಬರಮಾಡಿಕೊಂಡಿದೆ. ಹೂಗಳು ಅರಳುವ ಈ ವಸಂತವು ಉತ್ತರ ಗೋಳಾರ್ಧದಲ್ಲಿ ಮಾರ್ಚ್ 20ರಿಂದ ಆರಂಭವಾಗಿ ಜೂನ್ 2021ರವರೆಗೆ ಇರಲಿದೆ.
ಇಂದು ವಸಂತ ಸಂಕ್ರಾತಿಯಾಗಿದ್ದು ಈ ದಿನದಂದು ಸಮಭಾಜಕ ವೃತ್ತದ ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗಿದೆ.
ಈ ಋತುವಿನಲ್ಲಿ ಗಿಡ ಮರಗಳು ಚಿಗುರೋಕೆ ಪ್ರಾರಂಭವಾಗುತ್ತದೆ. ಈ ದಿನದ ಸಂಭ್ರಮವನ್ನ ಆಚರಿಸೋಕೆ ಗೂಗಲ್ ಡೂಡಲ್ನಲ್ಲಿ ಮುಳ್ಳು ಹಂದಿಯನ್ನ ಗುಲಾಬಿ, ನೀಲಿ, ಹಸಿರು, ಕೆಂಪು, ಕೇಸರಿ ಹಾಗೂ ಹಳದಿ ಬಣ್ಣದ ಹೂ ಹಾಗೂ ಎಲೆಗಳಿಂದ ಸಿಂಗರಿಸಿದೆ. ಇಲ್ಲಿ ಮುಳ್ಳು ಹಂದಿಯನ್ನೇ ಚಿತ್ರಿಸೋಕೆ ಕಾರಣ ಕೂಡ ಇದೆ. ಚಳಿಗಾಲದಲ್ಲಿ ಮುಳ್ಳುಹಂದಿಗಳು ಸುಮ್ಮನೇ ಮಲಗಿರುತ್ತದೆ. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಚಟುವಟಿಕೆಯಿಂದ ಇರುತ್ತವೆ.
ಇಲ್ಲಿಗೆ ಚಳಿಗಾಲ ಕೊನೆಗೊಂಡಿದ್ದು ಬೇಸಿಗೆ ಕಾಲದ ಅವಧಿ ಅಧಿಕೃತವಾಗಿ ಆರಂಭವಾಗಲಿದೆ.