ಸ್ಮಾರ್ಟ್ ಟಿವಿ ಪ್ಲಾಟ್‌ಫಾರಂ ಅನ್ನು ಪರಿಚಯಿಸುತ್ತಿರುವ ಗೂಗಲ್ ಟಿವಿ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ ಸಾಧ್ಯತೆ ಇದೆ.
ಉಚಿತ ಹಾಗೂ ಜಾಹೀರಾತು ಬೆಂಬಲಿತ ಟಿವಿ ಸ್ಟ್ರೀಮಿಂಗ್ ಸೇವಾದಾರ ಪಾಲುದಾರೊಂದಿಗೆ ಈ ಸಂಬಂಧ ಗೂಗಲ್ ಮಾತುಕತೆಯಲ್ಲಿದ್ದು, ಈ ಚಾನೆಲ್‌ಗಳನ್ನು ತನ್ನ ಸ್ಮಾರ್ಟ್ ಟಿವಿ ಪ್ಲಾಟ್‌ಫಾರಂಗೆ ಸೇರಿಸಲು ಚಿಂತನೆ ನಡೆಸಿದೆ. ಸಾಂಪ್ರದಾಯಿಕ ಟಿವಿ ವೀಕ್ಷಣೆಯಂತೆಯೇ ಈ ಅನುಭವ ಸಹ ಇರಲಿದೆ.
ಉಚಿತವಾಗಿ ಸ್ಟ್ರೀಮಿಂಗ್ ಆಗುವ ಚಾನೆಲ್‌ಗಳು ಮುಂಬರುವ ವಾರಗಳು ಹಾಗೂ ತಿಂಗಳುಗಳಲ್ಲಿ ಗೂಗಲ್ ಟಿವಿಯಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ. ಈ ಸಂಬಂಧ ಘೋಷಣೆ ಮಾಡುವ ಮುನ್ನ ತನ್ನ ಸ್ಮಾರ್ಟ್ ಟಿವಿ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿ ಗೂಗಲ್ ಇದೆ ಎನ್ನಲಾಗುತ್ತಿದೆ.
ಗಮನಿಸಿ…! ನಿಮ್ಮ ಫೋನ್ ನಿಂದ Google ಬ್ಯಾನ್ ಮಾಡಿದ ಈ 8 ಆಪ್ ಕೂಡಲೇ ಡಿಲಿಟ್ ಮಾಡಿ
ಚಾನೆಲ್‌ಗಳನ್ನು ಬ್ರೌಸ್ ಮಾಡಲೆಂದು ಬಳಕೆದಾರರಿಗೆ ಇದಕ್ಕೆಂದೇ ಲೈವ್ ಟಿವಿ ಮೆನು ಸಿಗಲಿದೆ. ಸ್ಟ್ರೀಮಿಂಗ್ ಚಾನೆಲ್‌ಗಳೊಂದಿಗೆ ಆಂಟೆನಾ ಮೂಲಕ ಸಂಪರ್ಕಕ್ಕೆ ಸಿಗುವ ಚಾನೆಲ್ ಗಳೂ ಸಹ ಜೊತೆಜೊತೆಯಲ್ಲಿ ಬಿತ್ತರಗೊಳ್ಳಲಿವೆ.
2014ರಲ್ಲಿ ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರಂಗೆ ಚಾಲನೆ ಕೊಟ್ಟ ಗೂಗಲ್ ಉಚಿತ ಟಿವಿ ಸ್ಟ್ರೀಮಿಂಗ್‌ಗೆ ಕಾಲಿಟ್ಟಿತ್ತು. ಕ್ರೋಮ್‌ಕಾಸ್ಟ್ ಹಾಗೂ ಸ್ಮಾರ್ಟ್ ಟಿವಿಗಳಿಗೆ ತನ್ನ ಆಂಡ್ರಾಯ್ಡ್ ಓಎಸ್‌ನ ಬಲ ಕೊಟ್ಟಿರುವ ಗೂಗಲ್, ಇದನ್ನೇ ತನ್ನ ಟಿವಿ ಸೇವೆಗೂ ಬಳಸಿಕೊಳ್ಳಲಿದೆ.