alex Certify Airtel ಗ್ರಾಹಕರಿಗೆ ಭರ್ಜರಿ ಸುದ್ದಿ: ಗೂಗಲ್ ನಿಂದ ಭಾರ್ತಿ ಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Airtel ಗ್ರಾಹಕರಿಗೆ ಭರ್ಜರಿ ಸುದ್ದಿ: ಗೂಗಲ್ ನಿಂದ ಭಾರ್ತಿ ಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ

ಭಾರತೀಯ ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ ಟೆಲ್‌ ನಲ್ಲಿ 1 ಬಿಲಿಯನ್ ಡಾಲರ್‌ ವರೆಗೆ ಹೂಡಿಕೆ ಮಾಡಲು ಗೂಗಲ್ ನಿರ್ಧರಿಸಿದೆ.

ಶುಕ್ರವಾರ ಆಲ್ಫಾಬೆಟ್ ಇಂಕ್‌ ನ ಗೂಗಲ್ ಭಾರತೀಯ ಟೆಲಿಕಾಂ ಆಪರೇಟರ್‌ನಲ್ಲಿ $ 1 ಬಿಲಿಯನ್ ವರೆಗೆ ಹೂಡಿಕೆ ಮಾಡಲಿದೆ ಎಂದು ಹೇಳಿದ್ದು, ಏರ್ ಟೆಲ್ ಡಿಜಿಟಲ್ ಕೊಡುಗೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಭಾರತಿ ಏರ್‌ಟೆಲ್ ಎನ್‌ಎಸ್‌ಇ 1.25% ಶುಕ್ರವಾರ ಗೂಗಲ್ ತನ್ನ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ನ ಭಾಗವಾಗಿ ಟೆಲಿಕಾಂ ಮೇಜರ್‌ನಲ್ಲಿ 1 ಬಿಲಿಯನ್‌ ಡಾಲರ್ ವರೆಗೆ ಹೂಡಿಕೆ ಮಾಡಲಿದೆ ಎಂದು ಘೋಷಿಸಿದೆ. ಏರ್‌ ಟೆಲ್‌ ನಲ್ಲಿ ಶೇಕಡ 1.28 ರಷ್ಟು ಮಾಲೀಕತ್ವವನ್ನು ಪಡೆಯಲು ಮತ್ತು ಸಂಭಾವ್ಯ ಬಹುವರ್ಷದ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಿದೆ.

ಗೂಗಲ್ ಭಾರ್ತಿ ಏರ್‌ಟೆಲ್‌ನಲ್ಲಿ ಪ್ರತಿ ಷೇರಿಗೆ 734 ರೂ.ನಲ್ಲಿ $700 ಮಿಲಿಯನ್ ಈಕ್ವಿಟಿ ಹೂಡಿಕೆಯನ್ನು ಮಾಡುತ್ತದೆ. Google International LLC ಗೆ ಭಾರ್ತಿ ಏರ್‌ಟೆಲ್‌ನ 71,176,839 ಈಕ್ವಿಟಿ ಷೇರುಗಳನ್ನು ಆದ್ಯತೆಯ ಆಧಾರದ ಮೇಲೆ 734 ರೂ.ಗೆ ಹಂಚಲಾಗುತ್ತದೆ, ಒಟ್ಟು 5,224.38 ಕೋಟಿ ರೂ.($700 ಮಿಲಿಯನ್). ಆರಂಭಿಕ ವಹಿವಾಟಿನಲ್ಲಿ ಶೇ.1.95ರಷ್ಟು ಏರಿಕೆ ಕಂಡು ಗರಿಷ್ಠ 721 ರೂ.ಆಗಿದೆ.

ಕೈಗೆಟುಕುವ ಇತರ ಕೊಡುಗೆಗಳ ಗುರಿಯ ಮೂಲಕ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಏರ್ ಟೆಲ್ ನೀಡಲು ಇದು ಸಹಕಾರಿಯಾಗಲಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...