ಪ್ರತಿಯೊಂದನ್ನು ಗೂಗಲ್ ಅಥವಾ ಪ್ಲೇ ಸ್ಟೋರ್ ಮೊರೆ ಹೋಗುವ ಜನರಿಗೆ ಮುಖ್ಯ ಮಾಹಿತಿಯೊಂದು ಇಲ್ಲಿದೆ. ಗೂಗಲ್ ಪ್ರಕಾರ ರೈವಲ್ ಆ್ಯಪ್‌ಗಳ ಮೇಲೆ ಕಣ್ಣಿಡಲು ಗೂಗಲ್ ಕೆಲ ಸಿಬ್ಬಂದಿಗಳನ್ನು ನೇಮಿಸಿದೆ ಎನ್ನಲಾಗಿದೆ.
ಗೂಗಲ್ ಅಭಿವೃದ್ಧಿಪಡಿಸದ ಆ್ಯಪ್‌ಗಳನ್ನು ಬಳಕೆದಾರರು ಯಾವ ರೀತಿ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಆ ಆ್ಯಪ್ ಗಳಲ್ಲಿ ಎಷ್ಟು ಹೊತ್ತು ಕಳೆಯುತ್ತಾರೆ? ದಿನಕ್ಕೆ ಎಷ್ಟು ಬಾರಿ ಅವುಗಳನ್ನು ತೆರೆಯುತ್ತಾರೆ ಎನ್ನುವುದನ್ನು ಗಮನಿಸಲಾಗುವುದು ಎಂದು ತಿಳಿದುಬಂದಿದೆ. ಪ್ರಮುಖವಾಗಿ ಟಿಕ್‌ಟಾಕ್, ಫೇಸ್‌ಬುಕ್ ನಂತರ ಆ್ಯಪ್ ಗಳ ಬಳಕೆಯ ಬಗ್ಗೆ ಗೂಗಲ್ ಆಂಡ್ಯಾಯ್ಡ್ ಲಾಕ್‌ಬಾಕ್ಸ್ ಎನ್ನುವ ತಂತ್ರಾಂಶದ ಮೂಲಕ ಗಮನಿಸಲಾಗುತ್ತಿದೆ ಎನ್ನಲಾಗಿದೆ.
ಈ ತಂತ್ರಾಂಶದ ಮೂಲಕ ಗೂಗಲ್ ಸಿಬ್ಬಂದಿಗಳು ಬಳಕೆದಾರರ ಸೂಕ್ಷ್ಮ ವಿಷಯಗಳ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ಆ್ಯಪ್ ಆರಂಭದ ವೇಳೆಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ಷರತ್ತುಗಳಿಗೆ ಒಪ್ಪಿಗೆ ಪಡೆಯಲಾಗುತ್ತದೆ.
ಈ ರೀತಿಯ ಗುಪ್ತ ಕಣ್ಣಿಡುವ ಮೂಲಕ, ಬಳಕೆದಾರರಿಗೆ ತಮ್ಮಿಂದ ಯಾವ ಹೊಸ ಆ್ಯಪ್ ನೀಡಬಹುದು ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತದೆ ಎನ್ನಲಾಗಿದೆ. ಈಗಾಗಲೇ ಟಿಕ್‌ಟಾಕ್‌ಗೆ ಸರಿಸಮನಾಗಿ ಶಾರ್ಟ್ಸ್ ಎನ್ನುವ ಆ್ಯಪ್ ಅಭಿವೃದ್ಧಿಪಡಿಸಲು ಗೂಗಲ್ ಸಿದ್ಧತೆ ನಡೆಸಿಕೊಂಡಿದ್ದು, ಮುಂದಿನ ವರ್ಷದ ವೇಳೆಗೆ ಇದು ಬಳಕೆದಾರರ ಕೈಸೇರಲಿದೆ ಎಂದು ಹೇಳಲಾಗಿದೆ.