ನವದೆಹಲಿ: ಭಾರತದಲ್ಲಿ ಒಂದು ವಾರದೊಳಗೆ ಟೆಕ್ ದೈತ್ಯ ಗೂಗಲ್ ಗೆ ಎರಡನೇ ಬಾರಿಗೆ ದಂಡ ವಿಧಿಸಲಾಗಿದೆ. ಗೂಗಲ್ 936 ಕೋಟಿ ರೂಪಾಯಿ ಪಾವತಿಸಬೇಕಿದೆ.
ಇತ್ತೀಚಿನ ದಿನಗಳಲ್ಲಿ ಗೂಗಲ್ ಭಾರತದಲ್ಲಿ ಕೆಲವು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಲ್ಫಾಬೆಟ್ ಇಂಕ್ ಮಾಲೀಕತ್ವದ ಸರ್ಚ್ ಇಂಜಿನ್ ದೈತ್ಯ ಗೂಗಲ್ ಗೆ ಇಂದು 936 ಕೋಟಿ ರೂ.(113.04 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ.
ಮತ್ತೊಂದು ಆಂಟಿಟ್ರಸ್ಟ್ ತನಿಖೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆ ದಂಡ ಜಾರಿಗೊಳಿಸಲಾಗಿದೆ. ಪಾವತಿ ಅಪ್ಲಿಕೇಶನ್ ಗಳು ಮತ್ತು ಅಪ್ಲಿಕೇಶನ್ ನಲ್ಲಿ ಪಾವತಿ ವ್ಯವಸ್ಥೆಗಳನ್ನು ಉತ್ತೇಜಿಸಲು ತನ್ನ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ Google ತಪ್ಪಿತಸ್ಥರೆಂದು ಕಂಡುಬಂದಿದೆ.
ಇದಕ್ಕೂ ಮೊದಲು, ಅಕ್ಟೋಬರ್ 20 ರಂದು ಆಂಡ್ರಾಯ್ಡ್ ಗೆ ಸಂಬಂಧಿಸಿದ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ಗೂಗಲ್‌ಗೆ 162 ಮಿಲಿಯನ್ USD(ಇದು ಸುಮಾರು 13,41,20,04,300 ರೂ.) ದಂಡ ವಿಧಿಸಿತ್ತು. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.