
ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಇದ್ರಲ್ಲಿ ಕಾಲರ್ ಟ್ಯೂನ್ ಕೂಡ ಒಂದು. ಕೊರೊನಾ ಬಗ್ಗೆ ಜನರಿಗೆ ಜಾಗೃತಿ ನೀಡಲು ಕಾಲರ್ ಟ್ಯೂನ್ ಹಾಕಲಾಗಿತ್ತು.
ಒಂದೆರಡು ತಿಂಗಳಲ್ಲಿ ಈ ಕಾಲರ್ ಟ್ಯೂನ್ ತೆಗೆಯಲಾಗುತ್ತೆ ಎಂದು ಜನರು ನಂಬಿದ್ದರು. ಆದ್ರೆ ಐದು ತಿಂಗಳು ಕಳೆದಿದೆ. ಈವರೆಗೂ ಕಾಲರ್ ಟ್ಯೂನ್ ಬದಲಾಗಿಲ್ಲ. ಇದು ಜನರಿಗೆ ಕಿರಿಕಿರಿಯುಂಟು ಮಾಡ್ತಿದೆ. ಗೂಗಲ್ ನಲ್ಲಿ ಜನರು ಕಾಲರ್ ಟ್ಯೂನ್ ತೆಗೆಯೋದು ಹೇಗೆ ಎಂಬ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರಂತೆ.
ಗೂಗಲ್ ಆಗಸ್ಟ್ ತಿಂಗಳಲ್ಲಿ ಯಾವ ವಿಷ್ಯದ ಬಗ್ಗೆ ಹೆಚ್ಚು ಹುಡುಕಾಟ ನಡೆದಿದೆ ಎಂಬ ಮಾಹಿತಿ ಬಹಿರಂಗಗೊಳಿಸಿದೆ. ಗೂಗಲ್, ಜನರು ಕೇಳಿದ ಟಾಪ್ ಫೈವ್ ಪ್ರಶ್ನೆಗಳು ಯಾವುದು ಎಂಬುದನ್ನು ಹೇಳಿದೆ. ಅದ್ರಲ್ಲಿ ಜನರು ಕಾಲರ್ ಟ್ಯೂನ್ ತೆಗೆಯೋದು ಹೇಗೆ ಎಂಬ ಪ್ರಶ್ನೆ ಕೇಳಿದ್ದಾರಂತೆ. ಹೆಚ್ಚಿನ ಜನರು ಜಿಯೋ ಕಾಲರ್ ಟ್ಯೂನ್ ತೆಗೆಯೋದು ಹೇಗೆ ಎಂಬ ಪ್ರಶ್ನೆ ಕೇಳಿದ್ದಾರಂತೆ.
ಆಗಸ್ಟ್ ತಿಂಗಳಲ್ಲಿ ಜನರು ಕೇಳಿದ ಪ್ರಶ್ನೆಗಳು ಹೀಗಿವೆ?
ಈಗ್ಲೂ ಅಮಿತ್ ಶಾ ಕೊರೊನಾ ಪಾಸಿಟಿವಾ…?
ಬಟ್ಟೆ ಮೇಲೆ ಕೊರೊನಾ ಎಷ್ಟು ಸಮಯ ಇರುತ್ತದೆ….?
ರಷ್ಯಾಗೆ ಕೊರೊನಾ ಲಸಿಕೆ ಸಿಕ್ಕಿದ್ಯಾ….?
ಜಿಯೋ ಫೋನ್ ನಲ್ಲಿ ಕೊರೊನಾ ಕಾಲರ್ ಟ್ಯೂನ್ ತೆಗೆಯೋದು ಹೇಗೆ…..?
ಭಾರತದಲ್ಲಿ ಕೊರೊನಾ ಲಸಿಕೆ ಎಂದು ಬರಬಹುದು….?
ಈ ಎಲ್ಲ ಪ್ರಶ್ನೆಗಳನ್ನು ಅತಿ ಹೆಚ್ಚು ಬಾರಿ ಕೇಳಲಾಗಿದೆ.