ಪೇಟಿಎಂ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಪೇಟಿಎಂ, ಗೂಗಲ್ ಪ್ಲೇ ಸ್ಟೋರ್ ನಿಯಮವನ್ನು ಉಲ್ಲಂಘಿಸಿದೆ ಎನ್ನುವ ಕಾರಣಕ್ಕೆ ಗೂಗಲ್ ಈ ಕೆಲಸ ಮಾಡಿದೆ. ಆದ್ರೆ ಪೇಟಿಎಂ ವ್ಯವಹಾರ ನಿಂತಿಲ್ಲ.
ಪೇಟಿಎಂ ಭಾರತದಲ್ಲಿ 50 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆನ್‌ಲೈನ್ ಕ್ಯಾಸಿನೊಗಳು ಮತ್ತು ಇತರ ಜೂಜಾಟದ ಅಪ್ಲಿಕೇಶನ್‌ಗಳನ್ನು ಭಾರತದ ಗೂಗಲ್ ಪ್ಲೇ ಸ್ಟೋರ್ ಅನುಮತಿಸುವುದಿಲ್ಲವೆಂದು ಗೂಗಲ್ ಹೇಳಿದೆ. ಪೇಟಿಎಂನಲ್ಲಿ ಜೂಜಾಟದ ಬಗ್ಗೆ ಪ್ರಚಾರ ಮಾಡಲಾಗುತ್ತದೆ. ಇದೇ ಕಾರಣಕ್ಕೆ ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ತೆಗೆಯಲಾಗಿದೆ ಎಂದು ಅಂದಾಜಿಸಲಾಗ್ತಿದೆ.
ಕಳೆದ ಕೆಲವು ದಿನಗಳಿಂದ, ಪೇಟಿಎಂ ಕ್ರಿಕೆಟ್ ಲೀಗ್‌ನ ಪ್ರಚಾರವನ್ನು ಪೇಟಿಎಂನಲ್ಲಿ ನಿರಂತರವಾಗಿ ಮಾಡಲಾಗ್ತಿದೆ. ಇದರಲ್ಲಿ ಭಾಗವಹಿಸುವ ಮೂಲಕ ಗ್ರಾಹಕರು ಕೋಟ್ಯಂತರ ರೂಪಾಯಿಗಳನ್ನು ಗಳಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಭಾರತದಲ್ಲಿ ಜೂಜಾಟವು ಕಾನೂನುಬದ್ಧವಾಗಿಲ್ಲದ ಕಾರಣ, ಜೂಜಾಟಕ್ಕೆ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ. ಈ ಮಧ್ಯೆ ಗೂಗಲ್ ಪ್ಲೇ ಸ್ಟೋರ್ ನಿಂದ ತಾತ್ಕಾಲಿಕವಾಗಿ ಪೇಟಿಎಂ ತೆಗೆಯಲಾಗಿದೆ. ಶೀಘ್ರವೇ ವಾಪಸ್ ಬರಲಿದೆ ಎಂದು ಪೇಟಿಎಂ ಹೇಳಿದೆ.