ಸುರಕ್ಷತೆ, ವೇಗ ಮತ್ತು ಸ್ಥಿರತೆಯನ್ನು ಸುಧಾರಿಸುವ ಉದ್ದೇಶದಿಂದ ಗೂಗಲ್ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಲ್ಕು ವಾರಗಳಿಗೊಮ್ಮೆ ಕ್ರೋಮ್ ನವೀಕರಣ ಮಾಡುವ ಘೋಷಣೆ ಮಾಡಿದೆ. ಕಳೆದ ಒಂದು ದಶಕದಿಂದ ಕ್ರೋಮ್ ಪ್ರತಿ 6 ವಾರಗಳಿಗೊಮ್ಮೆ ಹೊಸ ನವೀಕರಣ ಮಾಡುತ್ತ ಬಂದಿದೆ.
ಗುರುವಾರ ಕಂಪನಿಯು ಈ ಬಗ್ಗೆ ಹೇಳಿಕೆ ನೀಡಿದೆ. ಗೂಗಲ್ ಕ್ರೋಮ್ ಪರೀಕ್ಷೆ ಮತ್ತು ಬಿಡುಗಡೆ ಪ್ರಕ್ರಿಯೆಗಳನ್ನು ಸುಧಾರಿಸಿದೆ. ಎರಡು ವಾರಗಳ ಭದ್ರತಾ ನವೀಕರಣವನ್ನು ಬಿಡುಗಡೆ ಮಾಡಿದ್ದೇವೆ. ನವೀಕರಣದ ಸಮಯದ ಬದಲಾವಣೆಯಿಂದ ಹೊಸ ವೈಶಿಷ್ಟ್ಯಗಳನ್ನು ಸುಲಭವಾಗಿ ಹಾಗೂ ಬೇಗ ಪರಿಚಯಿಸಬಹುದು ಎಂದು ಕಂಪನಿ ಹೇಳಿದೆ.
ಪ್ರತಿ ನಾಲ್ಕು ವಾರಗಳಿಗೊಮ್ಮೆ ನವೀಕರಣ ಮಾಡುವುದು ಕ್ರೋಮ್‌ನ ಹೊಸ ಯೋಜನೆಯಾಗಿದೆ. ಇದು 2021 ರ ಮೂರನೇ ತ್ರೈಮಾಸಿಕದಲ್ಲಿ ಕ್ರೋಮ್ 94 ರಿಂದ ಪ್ರಾರಂಭವಾಗಲಿದೆ. ಇದು ಬ್ರೌಸರ್ ದುರುದ್ದೇಶಪೂರಿತ ದಾಳಿಗೆ ಗುರಿಯಾಗುವುದನ್ನು ತಪ್ಪಿಸುವ ಕಾರಣ ಗೂಗಲ್ ಈ ಕ್ರಮವನ್ನು ಬಳಕೆದಾರರು ಸ್ವಾಗತಿಸಿದ್ದಾರೆ.