ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ.
ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಭಾರತದಲ್ಲಿ ಉಚಿತವಾಗಿ ಪಾವತಿಸುವ ಸೌಲಭ್ಯ ಮುಂದುವರೆಯಲಿದೆ. ಅಮೆರಿಕದಲ್ಲಿ ಮಾತ್ರ ಶುಲ್ಕ ವಿದಿಸಲಾಗುವುದು ಎನ್ನಲಾಗಿದೆ.
ಗೂಗಲ್ ಸಂಸ್ಥೆ ಈ ಕುರಿತು ಸ್ಪಷ್ಟನೆ ನೀಡಿದ್ದು, ಅಮೆರಿಕದ ಬಳಕೆದಾರರಿಗೆ ಮಾತ್ರ ಶುಲ್ಕ ವಿಧಿಸಲಾಗುವುದು. ಮುಂದಿನ ವರ್ಷ ಅಮೆರಿಕ ಬಳಕೆದಾರರಿಗೆ ಹೊಸದಾಗಿ ವಿನ್ಯಾಸಗೊಳಿಸಿದ ಗೂಗಲ್ ಪೇ ಆಪ್ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ಗೂಗಲ್ ಪೇ ಪಾವತಿಗೆ ವಿಧಿಸಲಾಗುವುದು ಎಂದು ಹೇಳಿದ್ದರಿಂದ ಭಾರತದ ಬಳಕೆದಾರರಿಗೆ ಆತಂಕ ಎದುರಾಗಿತ್ತು. ಆದರೆ, ಭಾರತದಲ್ಲಿ ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಪಾವತಿಸುವ ಸೌಲಭ್ಯ ಮುಂದುವರೆಯಲಿದೆ ಎಂದು ಹೇಳಲಾಗಿದೆ.