ಅಂತರ್ಜಾಲ ಬಳಕೆದಾರರಿಗೆ ತಮ್ಮ ’ವೆಬ್ ಅಂಡ್ ಆಕ್ಟಿವಿಟಿ’ ಪುಟಗಳಿಗೆ ಪಾಸ್ವರ್ಡ್ ರಕ್ಷಣೆ ಇಟ್ಟುಕೊಳ್ಳಲು ತಾಂತ್ರಿಕ ಲೋಕದ ದಿಗ್ಗಜ ಗೂಗಲ್ ಅನುವು ಮಾಡಿಕೊಟ್ಟಿದೆ. ಈ ಮೂಲಕ ತನ್ನ ಬಳಕೆದಾರರು ತಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಯಾರೂ ನೋಡದಂತೆ ರಕ್ಷಿಸಿಕೊಳ್ಳಲು ಗೂಗಲ್ ಅವಕಾಶ ಕೊಟ್ಟಿದೆ.
ಒಂದು ವೇಳೆ ನಿಮ್ಮ ಮೊಬೈಲ್ ಅನ್ನು ಬೇರೆ ಯಾರಾದರೂ ಎತ್ತಿಕೊಂಡರೆ, ನಿಮ್ಮ ಖಾತ್ರಿಯಿಲ್ಲದೇ ಆವರು ನಿಮ್ಮ ಬ್ರೌಸಿಂಗ್ ಹಿಸ್ಟರಿ ನೋಡಲು ಸಾಧ್ಯವಿಲ್ಲ. ಈ ವೆರಿಫಿಕೇಶನ್ ಅನ್ನು ಆಕ್ಟಿವೇಟ್ ಮಾಡಲು ನೀವು ctivity.google.com ಗೆ ಭೇಟಿ ಕೊಟ್ಟ, ಅಲ್ಲಿ Manage My Activity ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿಂದ ನೀವು Require Extra Verification ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಸೇವ್ ಹಾಗೂ ನಿಮ್ಮ ಪಾಸ್ವರ್ಡ್ ಅನ್ನು ಎಂಟರ್ ಮಾಡುವ ಮೂಲಕ ನೀವು ಬದಲಾವಣೆ ಮಾಡಲು ನೋಡುತ್ತಿರುವಿರಿ ಎಂದು ಖಾತ್ರಿಪಡಿಸಬೇಕು.
ಆಹಾರ ಅಗಿಯುವ ಶಬ್ದದಿಂದ ಕಿರಿಕಿರಿಯಾಗುತ್ತದೆಯೇ….? ಹಾಗಿದ್ದಲ್ಲಿ ನಿಮಗಿರಬಹುದು ಈ ಸಮಸ್ಯೆ….!
ಒಂದು ವೇಳೆ ನೀವು ಈ ವೆರಿಫಿಕೇಶನ್ ಅನ್ನು ಆನ್ ಮಾಡದೇ ಇದ್ದಲ್ಲಿ, ಯಾರು ಬೇಕಾದರೂ ನಿಮ್ಮ ಗೂಗಲ್ ಆಕ್ಟಿವಿಟಿಯ ಹಿಸ್ಟರಿಯನ್ನು ನೋಡಬಹುದಾಗಿದೆ.
ಕೇಂದ್ರ ಸರ್ಕಾರದಿಂದ ಬಡವರು ಸೇರಿ ಎಲ್ಲರಿಗೂ ವಿಮೆ ಸೌಲಭ್ಯ: ವಿಮಾ ನವೀಕರಣಕ್ಕೆ ಮನವಿ
ತಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ಫೋನ್ಗಳನ್ನು ಯಾರಿಗಾದರೂ ಕೊಟ್ಟ ವೇಳೆ, ತಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಹೈಡ್ ಮಾಡಲು ಈ ಹೊಸ ವ್ಯವಸ್ಥೆ ಸಹಾಯಕ್ಕೆ ಬರಬಹುದು.