ಕೊರೋನಾ ಲಾಕ್ ಡೌನ್ ಹಿನ್ನೆಲೆ ವಿಶ್ವಾದ್ಯಂತ ಹಲವು ಪ್ರದೇಶಗಳು ನಿರ್ಬಂಧನೆಗೆ ಒಳಪಟ್ಟಿದೆ, ಸೋಂಕು ಹರಡಿರುವ ಮತ್ತು ಹರಡುವ ಸಾಧ್ಯತೆಗಳಿರುವ ಪ್ರದೇಶಗಳಿಗೆ ಜನರು ಓಡಾಟ ಕಡಿಮೆ ಮಾಡುವುದೇ ಒಳಿತು. ಇಂಥ ವಾತಾವರಣದಲ್ಲಿ ಬಗ್ಗೆ ಗೂಗಲ್ ಮ್ಯಾಪ್ ತನ್ನ ಬಳಕೆದಾರರಿಗೆ ಅರಿವು ಮೂಡಿಸುವ ಹೊಸ ಅಲರ್ಟ್ ವ್ಯವಸ್ಥೆ ಜಾರಿಗೆ ತರುತ್ತಿದೆ.
ಕೋವಿಡ್ -19 ಸಂಬಂಧಿಸಿದ ಪ್ರಯಾಣ ನಿರ್ಬಂಧಗಳ ಬಗ್ಗೆ ತನ್ನ ಬಳಕೆದಾರರನ್ನು ಎಚ್ಚರಿಸಲು ಗೂಗಲ್ ಮ್ಯಾಪ್ ಸೇವೆಯಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸುತ್ತಿದೆ. ರೈಲ್ವೆ ನಿಲ್ದಾಣದಲ್ಲಿನ ಜನದಟ್ಟಣೆ, ನಿರ್ದಿಷ್ಟ ಮಾರ್ಗದಲ್ಲಿ ಬಸ್ಸುಗಳ ಸಂಚಾರ ಪರಿಶೀಲಿಸಲು ಹಾಗೂ ಬಳಕೆದಾರರಿಗೆ ಮಾಹಿತಿ ನವೀಕರಣಕ್ಕೂ ಅವಕಾಶ ನೀಡಲಾಗುತ್ತಿದೆ.
ಭಾರತ ಸೇರಿದಂತೆ ಅರ್ಜೆಂಟೀನಾ, ಫ್ರಾನ್ಸ್, ನೆದರ್ಲ್ಯಾಂಡ್, ಯುಎಸ್, ಯುಕೆ ಸೇರಿ ವಿವಿಧ ದೇಶಗಳಲ್ಲಿ ಸಾರಿಗೆ ಸಂಬಂಧಿತ ಅಲರ್ಟ್ ವ್ಯವಸ್ಥೆ ತರಲಾಗುವುದು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.