ಇತ್ತೀಚೆಗಂತೂ ಜೀವನದ ಪ್ರತಿ ಹೆಜ್ಜೆಗೂ ಗೂಗಲ್ ಆಧಾರ ಎನ್ನುವಂತಾಗಿದೆ. ಎಲ್ಲ ವಿಷಯದಲ್ಲೂ ಗೂಗಲ್ ಕೇಳಿಯೇ ಮುಂದುವರಿಯುವಂತಾಗಿದೆ.
ಆದರೆ, ಗೂಗಲ್ ನ ಎಲ್ಲ ನಿಯಮಗಳನ್ನು ಅನುಸರಿಸುತ್ತಿದ್ದರೂ ಗ್ರಾಹಕರಿಗೆ ಬೇಕಾದಂತೆ ಸೇವೆ ಸಿಗುತ್ತಿಲ್ಲ. ಅನಾವಶ್ಯಕ ನೋಟಿಫಿಕೇಶನ್ ಬರುತ್ತವೆ. ಇದರಿಂದ ತೊಂದರೆಯೇ ಹೆಚ್ಚು. ಮುಖ್ಯವಾಗಿ ದತ್ತಾಂಶಗಳ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದೆ.
ಕಾನೂನು ಸಂಸ್ಥೆಯಾದ ಬೋಯಿಸ್ ಶಿಲ್ಲರ್ ಫ್ಲೆಕ್ಸ್ನರ್ ದಾವೆ ಹೂಡಿದ್ದು, ವೆಬ್ ಮತ್ತು ಆಪ್ ಆ್ಯಕ್ಟಿವಿಟಿಯನ್ನು ಆಫ್ ಮಾಡಿದ್ದರೂ ದತ್ತಾಂಶಗಳ ಮೇಲೆ ನಿಗಾ ಇಡಲಾಗುತ್ತಿದೆ, ಅನಾವಶ್ಯಕ ಜಾಹೀರಾತುಗಳು ಬರುತ್ತಿವೆ. ತನ್ನ ನಿಯಮಕ್ಕೆ ಒಳಪಟ್ಟ ಗ್ರಾಹಕರನ್ನು ಅನುಮಾನಿಸುತ್ತಿದೆ. ಗೂಗಲ್ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದೆ.
ಗೂಗಲ್ ವಿರುದ್ಧ ಅಮೆರಿಕಾದ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು, ದತ್ತಾಂಶ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.