alex Certify ಗೂಗಲ್​ ಬಳಕೆದಾರರಿಗೆ ಶಾಕ್:‌ ಫೋಟೋಸ್‌ ಬ್ಯಾಕಪ್‌ ಗೆ ಪಾವತಿಸಬೇಕು ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​ ಬಳಕೆದಾರರಿಗೆ ಶಾಕ್:‌ ಫೋಟೋಸ್‌ ಬ್ಯಾಕಪ್‌ ಗೆ ಪಾವತಿಸಬೇಕು ಹಣ

ಸತತ 5 ವರ್ಷಗಳಿಂದ ಗೂಗಲ್​​ ಫೋಟೋ ಮೂಲಕ ಮೊಬೈಲ್​ಗಳಲ್ಲಿ ಉಚಿತವಾಗಿ ಸಿಗುತ್ತಿದ್ದ ಅನಿಯಮಿತ ಫೋಟೋ ಬ್ಯಾಕಪ್​ ಸ್ಟೋರೇಜ್​ ವ್ಯವಸ್ಥೆಗೆ ಇನ್ಮುಂದೆ ಹಣ ಪಾವತಿಸಬೇಕಾಗಿ ಬರಬಹುದು.

ಇಷ್ಟು ದಿನ ಗೂಗಲ್​ ಫೋಟೋ ಸಹಾಯದಿಂದ ಮೊಬೈಲ್​ ಮೆಮೊರಿ ಖಾಲಿ ಮಾಡಿಕೊಳ್ಳದೇ ಎಲ್ಲಾ ಫೋಟೋಗಳನ್ನ ಈ ಅಪ್ಲಿಕೇಶನ್​ನಲ್ಲಿ ಶೇಖರಣೆ ಮಾಡಬಹುದಿತ್ತು. ಆದರೆ 2021ರ ಜೂನ್ 21ರ ಬಳಿಕ 15 ಗಿಗಾ ಬೈಟ್​ ಮೆಮೊರಿ ಮಾತ್ರ ಉಚಿತವಾಗಿ ಸಿಗಲಿದೆ.

ಇಲ್ಲಿಯವರೆಗೆ ನೀವು ಗೂಗಲ್​ ಫೋಟೋದಲ್ಲಿ ಶೇಖರಣೆ ಮಾಡಿಟ್ಟಿರೋ ಫೋಟೋಗಳಿಗೆ ಯಾವುದೇ ಚಾರ್ಜ್​ ಇರೋದಿಲ್ಲ. ಆದರೆ ಜೂನ್​ 1ರ ಬಳಿಕ 15 ಜಿಬಿಯಷ್ಟು ಡಾಕ್ಯೂಮೆಂಟ್​ಗಳನ್ನ ಮಾತ್ರ ನೀವು ಫ್ರೀಯಾಗಿ ಶೇಖರಣೆ ಮಾಡಬಹುದು.

ಆದರೆ 15 ಜಿಬಿ ಬಳಿಕ ನೀವು ಒಂದೋ ನಿಮ್ಮ ಫೋಟೋಸ್​ ಡಿಲೀಟ್​​​ ಮಾಡಬೇಕು, ಇಲ್ಲವೇ ಗೂಗಲ್​ ಒನ್ ಚಂದಾದಾರಗಬೇಕಾಗುತ್ತದೆ ಅಂತಾ ಕಂಪನಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...