ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನ್ ಧನ್ ಖಾತೆದಾರರಿಗೆ ಉಡುಗೊರೆಯನ್ನು ನೀಡಿದೆ. ಜನ್ ಧನ್ ಖಾತೆಯನ್ನು ಹೊಂದಿದ್ದರೆ ಅಥವಾ ಅದನ್ನು ತೆರೆಯಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಎಸ್‌ಬಿಐ ಟ್ವಿಟರ್ ನಲ್ಲಿ ಮಹತ್ವದ ಮಾಹಿತಿ ನೀಡಿದೆ. ಎಸ್‌ಬಿಐ ರುಪೇ ಜನ್ ಧನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ನಿಮಗೆ 2 ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಸಿಗಲಿದೆ.
ಎಸ್‌ಬಿಐ ರುಪೇ ಜನ್ ಧನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ, ನಿಮಗೆ 2 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮೆ ಸಿಗುತ್ತದೆ ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ. ಇದಕ್ಕಾಗಿ 90 ದಿನಗಳಿಗೊಮ್ಮೆ ಈ ಕಾರ್ಡ್ ಸ್ವೈಪ್ ಮಾಡಬೇಕು. ಹಾಗೆ ಮಾಡಿದ್ರೆ ನಿಮಗೆ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ಸಿಗಲಿದೆ.
ಜನ್ ಧನ್ ಖಾತೆಗೆ ಸರ್ಕಾರಿ ಯೋಜನೆಗಳ ಹಣ ನೇರವಾಗಿ ಖಾತೆಗೆ ಬರುತ್ತದೆ. ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಸಿಗಲಿದೆ. ಅಪಘಾತ ವಿಮೆ 2 ಲಕ್ಷ ರೂಪಾಯಿವರೆಗೆ ಸಿಗಲಿದೆ. 30,000 ರೂಪಾಯಿವರೆಗೆ ಲೈಫ್ ಕವರ್ ಸಿಗಲಿದೆ. ಖಾತೆ ತೆರೆಯುವವರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಠೇವಣಿ ಮೇಲೆ ಬಡ್ಡಿ ಸಿಗುತ್ತದೆ. ವಿಮೆ, ಪಿಂಚಣಿ ಉತ್ಪನ್ನಗಳನ್ನು ಖಾತೆಗಳ ಮೂಲಕ ಖರೀದಿಸಬಹುದು. ಜನ್ ಧನ್ ಖಾತೆ ಇದ್ದರೆ, ಪಿಎಂ ಕಿಸಾನ್ ಮತ್ತು ಶ್ರಮಯೋಗಿ ಮಾನ್ಧನ್ ನಂತಹ ಪಿಂಚಣಿ ಯೋಜನೆಯಲ್ಲಿ ಖಾತೆಗಳನ್ನು ತೆರೆಯಬಹುದು.
ಭಾರತದಲ್ಲಿ ವಾಸಿಸುವ ಯಾವುದೇ ನಾಗರಿಕನ ವಯಸ್ಸು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಖಾತೆ ತೆರೆಯಬಹುದು. ಖಾತೆ ತೆರೆಯಲು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಮತ್ತು ಕೆವೈಸಿ ಅವಶ್ಯಕತೆಗಳನ್ನು ಪೂರೈಸಬೇಕು. ಸಾರ್ವಜನಿಕ ಖಾತೆ ತೆರೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.