ಜಾಗತಿಕ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಸಮೀಕ್ಷೆಯೊಂದನ್ನ ನಡೆಸಿದ್ದು ಇದರನ್ವಯ ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಜನರು 2020ಕ್ಕೆ ಹೋಲಿಸಿದ್ರೆ 2021ರಲ್ಲಿ ಅಧಿಕ ವೇತನ ಪಡೆಯುವ ನಿರೀಕ್ಷೆ ಇದೆ.
ಕರೊನಾದಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನ ಕಡಿಮೆ ಮಾಡಲು ಕಂಪನಿಗಳು ಗ್ರಾಹಕರ ಬೇಡಿಕೆಯ ಹೆಚ್ಚಳಕ್ಕೆ ಪಣ ತೊಟ್ಟಿವೆ. ಇ ಕಾಮರ್ಸ್, ಇಂಧನ, ಹಣಕಾಸು ಸಂಸ್ಥೆಗಳು ಹಾಗೂ ಔಷಧಿ ತಯಾರಿಸುವ ಕಂಪನಿಗಳು 2021ರ ವೇಳೆಗೆ ತಮ್ಮ ಉದ್ಯೋಗಿಗಳಿಗೆ ಸರಾಸರಿ 7.3 ಶೇಕಡಾ ವೇತನ ಹೆಚ್ಚಳ ನೀಡುವ ಸಾಧ್ಯತೆ ಇದೆ.
2020ರಲ್ಲಿ ಭಾರತೀಯ ಕಂಪನಿಗಳು ನೀಡಿದ ವೇತನ ಏರಿಕೆ ಕಳೆದ 14 ವರ್ಷಗಳಲ್ಲೇ ನೀಡಿದ ಅತ್ಯಂತ ಕಡಿಮೆ ಏರಿಕೆ ಅಂತಾ ಅಯಾನ್ ಸಮೀಕ್ಷೆ ತಿಳಿಸಿದೆ. 1050 ಕಂಪನಿಗಳ ಮೇಲೆ ಸಮೀಕ್ಷೆ ನಡೆಸಿ ಈ ಡೇಟಾ ತಯಾರಿಸಲಾಗಿದೆ.