ನವದೆಹಲಿ: ಸರ್ಕಾರಿ ನೌಕರರಿಗೆ ಶುಭ ಸುದ್ದಿ ಇಲ್ಲಿದೆ. ಒಂದೇ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಎಲ್.ಟಿ.ಸಿ. ಪ್ರಯೋಜನ ಪಡೆಯಬಹುದಾಗಿದೆ.
ಎಲ್.ಟಿ.ಸಿ. ನಿಯಮಗಳ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರು, ಎಲ್.ಟಿ.ಸಿ. ಕುರಿತಾಗಿ ತಮ್ಮ ಅನುಮಾನ ವ್ಯಕ್ತಪಡಿಸಿದ್ದು ಒಂದು ಕಡೆ ಅಥವಾ ಎರಡು ಮಾರ್ಗಗಳಿಗೆ ನೌಕರರು ಹಣ ಪಡೆಯುತ್ತಾರೆಯೇ ಎಂದು ಕೇಳಲಾಗಿತ್ತು. ಒಂದೇ ಕುಟುಂಬದ ಎಲ್.ಟಿ.ಸಿ.ಗೆ ಅರ್ಹರಾದ ಸದಸ್ಯರು ಕೂಡ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಸರ್ಕಾರಿ ನೌಕರರ ಎಲ್.ಟಿ.ಸಿ. ನಿಯಮಗಳ ಕಾರ್ಯವಿಧಾನ ಕುರಿತಂತೆ ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟೀಕರಣದಂತೆ ಒಂದೇ ಕುಟುಂಬದ ಅನೇಕ ಸದಸ್ಯರು ಎಲ್.ಟಿ.ಸಿ. ಲಾಭ ಪಡೆಯಲು ಅರ್ಹರಾಗಿದ್ದರೆ, ಅದನ್ನು ಪ್ರತ್ಯೇಕವಾಗಿ ಕೂಡ ಪಡೆಯಬಹುದೆನ್ನಲಾಗಿದೆ.
ಸರ್ಕಾರಿ ನೌಕರರು ಎಲ್.ಟಿ.ಸಿ. ಸೌಲಭ್ಯಕ್ಕಾಗಿ ಹತ್ತಿರದ ವಿಮಾನ, ರೈಲು ನಿಲ್ದಾಣ ಅಥವಾ ಬಸ್ ಟರ್ಮಿನಲ್ ಗೆ ಪ್ರಯಾಣಿಸಿದರೆ ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸಿದರೆ ಆಗುವ ಖರ್ಚಿಗೆ ಸಮಾನನಾದ ಗರಿಷ್ಠ ಮೊತ್ತವನ್ನು ಅವರಿಗೆ ನೀಡಲಾಗುವುದು. ಇದರಲ್ಲಿ ಗರಿಷ್ಠ 100 ಕಿಲೋ ಮೀಟರ್ ವರೆಗೆ ಹಣ ಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಭರಿಸಬೇಕಾಗುತ್ತದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೋನಾ ಅವಧಿಯಲ್ಲಿ ಎಲ್.ಟಿ.ಸಿ. ನಿಯಮಗಳಲ್ಲಿ ಬದಲಾವಣೆ ತಂದ ನಂತರ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಗರಿಷ್ಠ 100 ಕಿಲೋಮೀಟರ್ ಮಿತಿ, ಎರಡೂ ಮಾರ್ಗಕ್ಕೆ ಹೊಂದಿಸಲಾಗಿದೆ ಎಂದು ಕೇಳಿಕೊಂಡಿದ್ದರು.
2021 ರ ಫೆಬ್ರವರಿ 4 ರಂದು ಕೇಂದ್ರ ಸರ್ಕಾರ ನೀಡಿದ ಸ್ಪಷ್ಟೀಕರಣದ ಅನ್ವಯ ಟ್ಯಾಕ್ಸಿ ಶುಲ್ಕ ಎನ್ನುವುದು ಸ್ಪಷ್ಟವಾಗಿದೆ. ಸುಲಭವಾಗಿ ಹೇಳುವುದಾದರೆ, 100 ಕಿ.ಮೀ. ಪ್ರಯಾಣ ಮತ್ತು 100 ಕಿ.ಮೀ. ರಿಟರ್ನ್ ಪ್ರಯಾಣದ ಶುಲ್ಕವನ್ನು ಪಾವತಿಸಲಾಗುವುದು. ಒಂದೇ ಕುಟುಂಬದವರು ಬೇರೆ ಬೇರೆ ಖಾಸಗಿ ಟ್ಯಾಕ್ಸಿ ಅಥವಾ ಇತರ ವಾಹನಗಳನ್ನು ಬಳಸಿದರೆ ಎಲ್.ಟಿ.ಸಿ. ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.