ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗೆ ಹೊಸ ಕ್ರಮವೊಂದನ್ನು ತೆಗೆದುಕೊಂಡಿರುವ ಗೂಗಲ್ ಪೇ, ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಮುಖಾಂತರ ಮಾಡುವ ವ್ಯವಹಾರಗಳ ಮಾಹಿತಿಯನ್ನು ನಿಯಂತ್ರಿಸುವ ಆಯ್ಕೆಯನ್ನು ಬಳಕೆದಾರರಿಗೆ ಕೊಡಲಾಗಿದೆ.
account.google.comಗೆ ಭೇಟಿ ಕೊಡುವ ಮೂಲಕ ಬಳಕೆದಾರರು ತಮ್ಮ ವ್ಯವಹಾರದ ಹಿಸ್ಟರಿಯನ್ನು ಅಳಿಸಿ ಹಾಕಬಹುದಾಗಿದೆ. ಮುಂದಿನ ವಾರದಿಂದ ಹೊಸ ಫೀಚರ್ ಕೊಡಲಿರುವ ಗೂಗಲ್ ಪೇ, ತನ್ನ ಕಿರು ತಂತ್ರಾಂಶದ ಮೂಲಕವೇ ಗ್ರಾಹಕರು ತಮ್ಮ ಪಾವತಿ ಚಟುವಟಿಕೆಯನ್ನು ಬಳಸಿಕೊಂಡು ಗೂಗಲ್ ಪೇ ಪರ್ಸನಲೈಸ್ಡ್ ಫೀಚರ್‌ಗಳನ್ನು ಒದಗಿಸಬಹುದು ಎಂದು ನಿರ್ಧರಿಸಬಹುದಾಗಿದೆ.
ಗೂಗಲ್ ಪೇ ಕಿರುತಂತ್ರಾಂಶದ ಮುಂದಿನ ಅಪ್‌ಗ್ರೇಡ್ ಮೂಲಕ ಬಳಕೆದಾರರು ಈ ಹೊಸ ಫೀಚರ್ ಮುಖಾಂತರ ತಮ್ಮ ಪಾವತಿ ಚಟುವಟಿಕೆಗಳನ್ನು ಇನ್ನಷ್ಟು ಕಂಟ್ರೋಲ್ ಮಾಡಬಹುದಾಗಿದೆ.