alex Certify ರೈತರಿಗೆ ಗುಡ್ ನ್ಯೂಸ್: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಿವಿಧ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಿವಿಧ ಸೌಲಭ್ಯ

ಕೊಪ್ಪಳ: ರಾಷ್ಟ್ರೀಯ ಕೃಷಿವಿಕಾಸ ಯೋಜನೆಯಡಿ(ಆರ್.ಕೆ.ವಿ.ವೈ) ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ರೈತರಿಗೆ ವಿವಿಧ ಧನಸಹಾಯ ಸೌಲಭ್ಯ ನೀಡಲಾಗುತ್ತಿದ್ದು, ಸದಪಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆರ್.ಕೆ.ವಿ.ವೈ ಯೋಜನೆಗಳ ವಿವರ;

ರಾಷ್ಟ್ರೀಯ ಕೃಷಿವಿಕಾಸ ಯೋಜನೆಗಳಾದ ಹನಿ ನೀರಾವರಿಗೆ ಅಗತ್ಯವಿರುವ ನೀರಿನಲ್ಲಿ ಕರಗುವ 19:19:19 ರಸಗೊಬ್ಬರವನ್ನು ಸಂಬಂಧಪಟ್ಟ ತಾಲ್ಲೂಕು ಕಛೇರಿಗಳಲ್ಲಿ ರೈತರು ತಮ್ಮ ಪಹಣಿ ಮತ್ತು ಬೆಳೆಯ ದಾಖಲಾತಿಗಳನ್ನು ನೀಡಿ ಪಡೆಯಬಹುದು.

ತೋಟಗಾರಿಕೆ ಇಲಾಖೆಯಲ್ಲಿ 20 ಕೆಜಿ ಪ್ಲಾಸ್ಟಿಕ್ ಕಿಟ್ಸ್ ಗಳಿಗೆ ಶೇಕಡ 25 ರಷ್ಟು ಧನಸಹಾಯ ಲಭ್ಯವಿದ್ದು, ಕಚೇರಿಗೆ ಅವಶ್ಯವಿರುವ ದಾಖಲಾತಿ ಸಲ್ಲಿಸಿ ಸೌಲಭ್ಯ ಪಡೆಯಬಹುದು.

ಹೂ, ಹಣ್ಣು, ಇತರೆ ಬೆಳೆಗಳ ಹೊದಿಕೆಗಳನ್ನು(Crop/Fruit/Flower Cover) ರೈತರು ಅಗ್ರಿಪ್ಲಾಸ್ಟ್ ಟೆಕ್ ಇಂಡಿಯಾ ನಲ್ಲೂರು ಗ್ರಾಮ, ಕೃಷ್ಣಗಿರಿ, ಹೊಸೂರು, ತಮಿಳುನಾಡು(7339683838), ಇವರಿಂದ 50,000 ರೂ. ಪಾವತಿಸಿ ಖರೀದಿಸಿ ಬಿಲ್ಲನ್ನು ಸಂಬಂಧಪಟ್ಟ ತಾಲ್ಲೂಕು ಕಛೇರಿಗೆ ಸಲ್ಲಿಸಿದರೆ ಶೇಕಡ 25 ರಂತೆ ಪ್ರತಿ ಹೆಕ್ಟೇರ್ 12,500 ರೂ ಧನಸಹಾಯ ನೀಡಲಾಗುವುದು.

ತೋಟಗಾರಿಕೆ ಬೆಳೆಗಳಿಗೆ ವಿಶೇಷ ಉತ್ತೇಜನ ಕಾರ್ಯಕ್ರಮದಡಿ ದ್ರಾಕ್ಷಿ ಮತ್ತು ಮಾವು ತುಂಬಿಸುವ ರಟ್ಟಿನ ಕೋರೊಗೇಟೆಡ್ ಬಾಕ್ಸ್ ಗಳನ್ನು ಅನುಶ್ರೀ ಪ್ಯಾಕೇಜಿಂಗ್, ರಾಮಚಂದ್ರಪುರ, ಬೆಂಗಳೂರು(9916580049, 9449813669), ಇಲ್ಲಿ ನೋಂದಾಯಿಸಿ ಸಂಸ್ಥೆಯಿಂದ ರೈತರು 15,000 ರೂ ಪಾವತಿಸಿ ಖರೀದಿಸಿದರೆ ಶೇಕಡ 25 ರಂತೆ 3750 ರೂ. ಪ್ರತಿ  ಹೆಕ್ಟೇರ್ ಗೆ ನೀಡಲಾಗುವುದು.

ರೈತರೇ ನಿರ್ಮಿಸಿಕೊಳ್ಳುವ ಕಡಿಮೆ ವೆಚ್ಚದ ಸುರಂಗ ಮಾದರಿಯ ಹಸಿರು ಮನೆ(ವಾಲ್ಕಿಂಗ್ ಟನಲ್ ಟೈಪ್ ಗ್ರೀನ್ ಹೌಸ್) 20 ಮೀ. ಉದ್ದ, 8 ಮೀ. ಅಗಲ 160 ಚದರ ಮೀ. ಅಳತೆಯ ಒಂದು ಘಟಕಕ್ಕೆ ಶೇ. 50 ರಂತೆ 48,000 ರೂ. ಸಹಾಯದನ ನೀಡಲಾಗುವುದು. ಈ ರೀತಿಯ 5 ಘಟಕಗಳನ್ನು ನಿರ್ಮಿಸಿಕೊಂಡಲ್ಲಿ ಶೇ. 50 ರಂತೆ ಗರಿಷ್ಟ ಒಟ್ಟು 2,40,000 ರೂ. ಗಳಿಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ತೋಟಗಾರಿಕೆ ಇಲಾಖೆ ಈ ಸೌಲಭ್ಯವನ್ನು ಪಡೆಯಲು ಆಸಕ್ತರು ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಅಳವಡಿಸಿಕೊಂಡಲ್ಲಿ ಮಾತ್ರ ಸಹಾಯಧನಕ್ಕೆ ಅರ್ಹರು ಹಾಗೂ ಸರ್ಕಾರವು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಬೇಕು. ಅರ್ಜಿ ಸಲ್ಲಿಸಲು ಜ. 31 ಕೊನೆ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...