alex Certify ರೈತರಿಗೆ ಮತ್ತೊಂದು ಗುಡ್ ನ್ಯೂಸ್: 3 ಲಕ್ಷ ರೂ. ಸಾಲ ಸೌಲಭ್ಯದ ಪಶು ಕಿಸಾನ್ ಕ್ರೆಡಿಟ್ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: 3 ಲಕ್ಷ ರೂ. ಸಾಲ ಸೌಲಭ್ಯದ ಪಶು ಕಿಸಾನ್ ಕ್ರೆಡಿಟ್ ಯೋಜನೆ

ನವದೆಹಲಿ: ರೈತರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ರೈತರ ಆರ್ಥಿಕ ಅಭಿವೃದ್ಧಿ, ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಸರ್ಕಾರ ಪಶುಸಂಗೋಪನೆ ಕೈಗೊಳ್ಳಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಿದೆ. ರೈತರು ಹಸು, ಎಮ್ಮೆ, ಮೇಕೆ, ಕುರಿ, ಹಂದಿ, ಕೋಳಿಗಳನ್ನು ಖರೀದಿಸಲು ಈ ಯೋಜನೆಯಡಿ ಸಾಲ ಪಡೆಯಬಹುದು.

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಯಾವುದೇ ಗ್ಯಾರಂಟಿ ಇಲ್ಲದೇ ಪಶುಪಾಲನೆ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯ ಈ ಯೋಜನೆಯಲ್ಲಿ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಸಾಲಸೌಲಭ್ಯ ಒದಗಿಸಲಿದ್ದು, 1.60 ಲಕ್ಷ ರೂ. ವರೆಗೆ ಯಾವುದೇ ಗ್ಯಾರಂಟಿ ನೀಡಬೇಕಿಲ್ಲ.

ಹಸುವಿಗೆ 40,783 ಎಮ್ಮೆಗೆ 60,249 ರೂ. ನಿಗದಿ ಮಾಡಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಮೊಬೈಲ್ ನಂಬರ್, ಪಾಸ್ಪೋರ್ಟ್ ಸೈಜ್ ಫೋಟೋ ಸೇರಿ ಅಗತ್ಯ ದಾಖಲೆ ನೀಡಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...