ಕಡಿಮೆ ಸಂಬಳ ಬರುವವರು ಚಿಂತಿಸಬೇಕಾಗಿಲ್ಲ. 25 ಸಾವಿರಕ್ಕಿಂತ ಕಡಿಮೆ ಸಂಬಳ ಬರುವವರಿಗೆ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ನೀಡುತ್ತದೆ. ಕೇವಲ 25 ರೂಪಾಯಿಗೆ ಅಧ್ಯಯನ, ಔಷಧಿ, ಮದುವೆ ಸೇರಿದಂತೆ ಕೆಲವೊಂದು ಸೌಲಭ್ಯಗಳನ್ನು ನೀಡ್ತಿದೆ. ಅನೇಕ ರಾಜ್ಯಗಳಲ್ಲಿ ಇಂತ ಸೌಲಭ್ಯವಿದೆ. ಆದ್ರೆ ಕಾರ್ಮಿಕರಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ, ಸೌಲಭ್ಯದಿಂದ ವಂಚಿತರಾಗ್ತಾರೆ.
ಯೋಜನೆ ಪ್ರಕಾರ, ಪ್ರತಿ ತಿಂಗಳು ಕಾರ್ಮಿಕರು 75 ರೂಪಾಯಿ ಸರ್ಕಾರದ ಕಲ್ಯಾಣ ನಿಧಿಗೆ ಜಮಾ ಮಾಡಬೇಕು. ಕಾರ್ಮಿಕರ ವೇತನದಿಂದ 25 ರೂಪಾಯಿ ಹಾಗೂ ಕಂಪನಿ ಖಾತೆಯಿಂದ 50 ರೂಪಾಯಿ ಕಡಿತವಾಗುತ್ತದೆ. ಪ್ರತಿ ಕಾರ್ಖಾನೆ ಮುಂದೆ ಈ ಬೋರ್ಡ್ ಕಡ್ಡಾಯ. ಮಹಿಳಾ ಸಿಬ್ಬಂದಿಗೆ ಮದುವೆ ಸಂದರ್ಭದಲ್ಲಿ 51000 ರೂಪಾಯಿ ನೀಡಲಾಗುತ್ತದೆ. ಕಾರ್ಮಿಕರಿಗೆ ಹೆಣ್ಣು ಮಕ್ಕಳಿದ್ದರೆ ಮೂವರು ಮಕ್ಕಳ ಮದುವೆಗೆ 51 ಸಾವಿರ ರೂಪಾಯಿ ನೀಡಲಾಗುತ್ತದೆ.
ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹಣ ನೀಡಲಾಗುತ್ತದೆ. ಶಾಲೆ ಉಡುಗೆ, ಪುಸ್ತಕ ಖರೀದಿಗೆ 3 ಸಾವಿರದಿಂದ 4 ಸಾವಿರದವರೆಗೆ ಪ್ರತಿ ತಿಂಗಳು ನೀಡಲಾಗುತ್ತದೆ. 9ನೇ ತರಗತಿ ನಂತ್ರ ವಿದ್ಯಾರ್ಥಿ ವೇತನವಾಗಿ 5000 ರಿಂದ 16000 ರೂಪಾಯಿಗಳನ್ನು ನೀಡಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು 2000 ರೂಪಾಯಿಯಿಂದ 31000 ರೂಪಾಯಿವರೆಗೆ ನೀಡಲಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕಾರ್ಮಿಕರ ಮಕ್ಕಳಿಗೆ ಸ್ಪರ್ಧೆ ಆಧಾರದ ಮೇಲೆ 2000 ರಿಂದ 31000 ರೂಪಾಯಿಗಳನ್ನು ನೀಡಲಾಗುವುದು. ಕಾರ್ಮಿಕರ ಪತ್ನಿಯ ಹೆರಿಗೆಗೆ 10 ಸಾವಿರ ನೀಡಲಾಗುವುದು. ಕನ್ನಡಕ ಖರೀದಿಗೆ 1500 ರೂಪಾಯಿ ನೀಡಲಾಗುವುದು. ಕೆಲಸದ ವೇಳೆ ಅಂಗವೈಕಲ್ಯವುಂಟಾದ್ರೆ 1.5 ಲಕ್ಷದವರೆಗೆ ಹಣ ನೀಡಲಾಗುವುದು. ಬೈಸಿಕಲ್ ಖರೀದಿ, ಹೊಲಿಗೆ ಯಂತ್ರ ಖರೀದಿ ಸೇರಿದಂತೆ ಕಾರ್ಮಿಕರ ಜೀವನವನ್ನು ಸುಗಮಗೊಳಿಸಲು ಆರ್ಥಿಕ ನೆರವು ನೀಡಲಾಗುವುದು. ಸದ್ಯ ಹರ್ಯಾಣದಲ್ಲಿ ಈ ಸೌಲಭ್ಯವಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಯೋಜನೆ ಜಾರಿಯಲ್ಲಿದೆ.