ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಐಸಿಐಸಿಐ ಗೂಗಲ್ ಪೇ ಜೊತೆ ಒಪ್ಪಂದ ಮಾಡಿಕೊಂಡಿದೆ.
ಗ್ರಾಹಕರು ಇನ್ಮುಂದೆ ಗೂಗಲ್ ಪೇ ಮೂಲಕ ಸುಲಭವಾಗಿ ಫಾಸ್ಟ್ ಟ್ಯಾಗ್ ಪಡೆಯಬಹುದು. ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ ನೋಂದಾಯಿತ ಯುಪಿಐ ಮೂಲಕ ಬ್ಯಾಂಕಿನ ಗ್ರಾಹಕರು ಫಾಸ್ಟ್ಯಾಗ್ ಖರೀದಿಸಬಹುದು. ಪೇಮೆಂಟ್ ಅಪ್ಲಿಕೇಶನ್‌ನಲ್ಲಿಯೇ ಯುಪಿಐ ಮೂಲಕ ಐಸಿಐಸಿಐ ಬ್ಯಾಂಕ್ ಫಾಸ್ಟ್ಯಾಗ್ ಡಿಜಿಟಲ್ ರೂಪದಲ್ಲಿ ಆರ್ಡರ್ ಮಾಡಲು, ಟ್ರ್ಯಾಕ್ ಮಾಡಲು ಮತ್ತು ರೀಚಾರ್ಜ್ ಮಾಡಲು ಅವಕಾಶವಿದೆ.
ಫಾಸ್ಟ್ಯಾಗ್ ಖರೀದಿಸಲು ಟೋಲ್ ಪ್ಲಾಜಾ ಅಥವಾ ಬೇರೆ ಎಲ್ಲಿಗೂ ಹೋಗಬೇಕಾಗಿಲ್ಲ. ಐಸಿಐಸಿಐ, ಫಾಸ್ಟ್ಯಾಗ್ ನೀಡಲು ಗೂಗಲ್ ಪೇ ಜೊತೆ ಒಪ್ಪಂದ ಮಾಡಿದ ಮೊದಲ ಬ್ಯಾಂಕ್ ಆಗಿದೆ. ಬ್ಯಾಂಕ್ ಈ ನಿರ್ಧಾರ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಗ್ರಾಹಕರು ಗೂಗಲ್ ಪೇ ಅಪ್ಲಿಕೇಷನ್ ತೆರೆಯಬೇಕು. ಅಲ್ಲಿ ಐಸಿಐಸಿಐ ಬ್ಯಾಂಕ್ ಫಾಸ್ಟ್ಯಾಗ್ ಕ್ಲಿಕ್ ಮಾಡಬೇಕು. ಅಲ್ಲಿ ಪ್ಯಾನ್ ಸಂಖ್ಯೆ, ಆರ್ಸಿ ನಕಲು, ವಾಹನ ಸಂಖ್ಯೆ ಮತ್ತು ವಿಳಾಸದ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಪರಿಶೀಲಿಸಿದ ನಂತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಐಸಿಐಸಿಐ ಬ್ಯಾಂಕಿನ ಗ್ರಾಹಕರಲ್ಲದ ಬಳಕೆದಾರರು www.icicibank.fastag ಗೆ ಭೇಟಿ ನೀಡಿ ಫಾಸ್ಟ್ಯಾಗ್ ಖರೀದಿಸಬಹುದು.