ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರನೇ ಕಂತು ಶೀಘ್ರವೇ ರೈತರ ಖಾತೆ ಸೇರಲಿದೆ. ಈ ಬಾರಿ ಸುಮಾರು 10 ಕೋಟಿ ರೈತರು 2 – 2 ಸಾವಿರ ರೂಪಾಯಿಗಳನ್ನು ಪಡೆಯಲಿದ್ದಾರೆ. ಕೊರೊನಾ ಕಾಲದಲ್ಲೂ ಮೋದಿ ಸರ್ಕಾರ ಸುಮಾರು 20,000 ಕೋಟಿ ರೂಪಾಯಿಗಳ ಸಹಾಯವನ್ನು ರೈತರಿಗೆ ಮಾಡ್ತಿದೆ.
ಈ ಹಣವು ಖಾರೀಫ್ ಋತುವಿನಲ್ಲಿ ಬಹಳ ಸಹಾಯವಾಗಲಿದೆ. ಯೋಜನೆಯ ಸಿಇಒ ವಿವೇಕ್ ಅಗರ್ವಾಲ್, ಹಣವನ್ನು ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಈ ಹಣವನ್ನು ನೋಂದಾಯಿತ ರೈತರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
ಪಿಎಂ ಕಿಸಾನ್ ಯೋಜನೆ ಜಾರಿಗೆ ಬಂದು ಇಂದಿಗೆ 19 ತಿಂಗಳುಗಳು ಪೂರ್ಣಗೊಂಡಿವೆ. ಯೋಜನೆಯಡಿ ಈವರೆಗೆ 10 ಕೋಟಿ 22 ಲಕ್ಷ ರೈತರು ಹೆಸರು ನೋಂದಾಯಿಸಿದ್ದಾರೆ. ಪಶ್ಚಿಮ ಬಂಗಾಳ ಮಾತ್ರ ಇದನ್ನು ಇನ್ನೂ ಜಾರಿಗೆ ತಂದಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಕಳುಹಿಸುವ ಯೋಜನೆ ಇದಾಗಿದೆ.