alex Certify ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರು‌ – ಡಿಪ್ಲೋಮಾದಾರರಿಗೆ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರು‌ – ಡಿಪ್ಲೋಮಾದಾರರಿಗೆ ಗುಡ್‌ ನ್ಯೂಸ್

ರೈಲ್ವೆ ಇಲಾಖೆ ಕೆಲಸ ಮಾಡಬೇಕೆಂಬ ಕನಸು ಉಳ್ಳವರಿಗೆ ಭಾರತೀಯ ರೈಲ್ವೆ ಇಲಾಖೆ ಶುಭಸುದ್ದಿಯೊಂದನ್ನ ನೀಡಿದೆ. ರೈಲ್ವೆ ವ್ಹೀಲ್​ ಪ್ಲಾಂಟ್​​ಗಳಲ್ಲಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆ ಅಧಿಕೃತ ವೆಬ್​ಸೈಟ್ ಖಾತೆ https://rwf.indianrailways.gov.in/ ನಲ್ಲಿ ಆನ್​ಲೈನ್​ ಅರ್ಜಿ ಸಲ್ಲಿಸಬಹುದಾಗಿದೆ.

ಇಂಜಿನಿಯರಿಂಗ್​ ಅಥವಾ ಡಿಪ್ಲೊಮಾ (ಮೆಕಾನಿಕಲ್​, ಎಲೆಕ್ಟ್ರಿಕಲ್​, ಕಂಪ್ಯೂಟರ್​ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್) ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಭ್ಯರ್ಥಿ ಅರ್ಹತೆಗೆ ಕುರಿತಾದ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಅರ್ಜಿ ಆಹ್ವಾನಿಸಲಾಗಿರುವ ಹುದ್ದೆಗಳು
1. ಗ್ರ್ಯಾಜುಯೇಟ್​ ಇಂಜಿನಿಯರ್ಸ್ – 10 ಹುದ್ದೆ

2. ಡಿಪ್ಲೊಮಾ ಇಂಜಿನಿಯರಿಂಗ್​ – 60 ಹುದ್ದೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 14 ಜನವರಿ 2021. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರು ಯಾವುದೇ ಪ್ರವೇಶಾತಿ ಶುಲ್ಕ ಭರಿಸುವ ಅಗತ್ಯವಿಲ್ಲ ಅಂತಾ ರೈಲ್ವೇ ಇಲಾಖೆ ತಿಳಿಸಿದೆ.

ನೇರ ನೇಮಕಾತಿ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಇರಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಲಿಖಿತ ಪರೀಕ್ಷೆ ಇರೋದಿಲ್ಲ. ಇಂಜಿನಿಯರಿಂಗ್​ನಲ್ಲಿ ಪಡೆದ ಅಂಕಗಳನ್ನ ಆಧರಿಸಿ ಹುದ್ದೆಯನ್ನ ನೀಡಲಾಗುತ್ತೆ. ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...