ನವದೆಹಲಿ: ಕೊರೋನಾ ಸಾಂಕ್ರಮಿಕ ರೋಗದ ನಡುವೆಯೂ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಟಿಸಿಎಸ್ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
ಭಾರತದ ಅತಿ ದೊಡ್ಡ ಐಟಿ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್(ಟಿಸಿಎಸ್)ನಲ್ಲಿ ಸೆಪ್ಟೆಂಬರ್ 30, 2020ರ ವೇಳೆಗೆ 4.53 ಲಕ್ಷ ಉದ್ಯೋಗಿಗಳಿದ್ದಾರೆ. 3.52 ಲಕ್ಷಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಅನೇಕ ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಲಾಗಿದೆ. 4.27 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ವಿವಿಧ ತರಬೇತಿ ನೀಡಲಾಗಿದೆ.
ಪ್ರತಿಭೆಗಳ ಅಭಿವೃದ್ಧಿಯಲ್ಲಿ ಉನ್ನತ ಮಟ್ಟದ ಕೌಶಲ್ಯ ಮತ್ತು ನವೀನ ತರಬೇತಿ ವಿಧಾನಗಳು, ಟಿಸಿಎಸ್ ಮುಂದುವರಿದ ಹೂಡಿಕೆಗಳು ಉದ್ಯಮದ ಪ್ರಮುಖ ಫಲಿತಾಂಶಗಳಿಗೆ ಕಾರಣವಾಗಿವೆ. ಮಾನವ ಸಂಪನ್ಮೂಲ ನೀತಿಗಳ ಹೂಡಿಕೆ ಟಿಸಿಎಸ್ ಅನ್ನು ಜಾಗತಿಕ ಉದ್ಯಮದ ಮಾನದಂಡವನ್ನಾಗಿ ಮಾಡಿದೆ. ಟಿಸಿಎಸ್ ಮಾನವ ಸಂಪನ್ಮೂಲ ಜಾಗತಿಕ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಈ ಬಗ್ಗೆ ಮಾಹಿತಿ ನೀಡಿ, ಜಾಗತಿಕವಾಗಿ ಶೇಕಡ 2 ರಷ್ಟು ನೇಮಕಾತಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.